ಬೆಳ್ಳಾರೆ: ನಿನ್ನೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ರಾಝೀಕ್ ರವರ ಮೃತದೇಹ ಇದೀಗ ಬಪ್ಪಳಿಗೆ ಮಸೀದಿಯಲ್ಲಿ ಎಲ್ಲಾ ಪರಿಪಾಲನೆಗಳನ್ನು ಮುಗಿಸಿಕೊಂಡು ಇದೀಗ 8.30 ವರೆಗೆ ಹೊರಡಲಿದೆ.

ಬಪ್ಪಳಿಗೆ ಮಸೀದಿಯಿಂದ ನೇರವಾಗಿ ಬೆಳ್ಳಾರೆಯ ಯುವಕನ ಮನೆಯಾದ ಉಮಿಕ್ಕಿಳಕ್ಕೆ ತೆರಳಿ 9.15ಕ್ಕೆ ಸರಿಯಾಗಿ ಬೆಳ್ಳಾರೆ ಮಸೀದಿಗೆ ತಲುಪಲಿದ್ದಾರೆ.
ದಫನ ಕಾರ್ಯ ಎಲ್ಲವು ಕುಟುಂಬದ ಜಮಾಅತ್ ಆದಂತಹ ಬೆಳ್ಳಾರೆ ಮಸೀದಿಯಲ್ಲಿ ನಡೆಯಲಿದ್ದು ಈಗಾಗಲೇ ಮನೆಕಡೆ ಹಾಗೂ ಮಸೀದಿ ಕಡೆ ನೂರಾರು ಸಾರ್ವಜನಿಕರು ಸೇರಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಯುವಕನ ಎಲ್ಲಾ ಕಾರ್ಯಗಳಲ್ಲಿ ಹಲವು ಸಾಮಾಜಿಕ ಕಾರ್ಯಕರ್ತರು ಬಂದು ಸೇರಿಕೊಂಡು ಎಲ್ಲಾ ಕೆಲಸ ಕಾರ್ಯಗಳನ್ನು ನಡೆಸಿ ಕೊಟ್ಟಿದ್ದು ಅಲೀ ಪರ್ಲಡ್ಕ ಹಾಗೂ ಬಶೀರ್ ಪರ್ಲಡ್ಕರವರು ಮಧ್ಯರಾತ್ರಿಯ ವರೆಗೆ ಕುಟುಂಬಸ್ಥರ ಜೊತೆ ನಿಂತು ಬಹಳಷ್ಟು ಮುತುವರ್ಜಿ ವಹಿಸಿಕೊಂಡಿದ್ದು ಎಲ್ಲರೂ ಮೆಚ್ಚುಗೆಗೆ ಪಾತ್ರರಾಗಿದ್ದರು.
ಘಟನೆಯ ಬಗ್ಗೆ ಡಿಟಿವಿ ಕನ್ನಡದಲ್ಲಿ ನಿನ್ನೆ ನೀಡಿದ ವರದಿ: ಬೆಳ್ಳಾರೆ: ಬೆಳ್ಳಾರೆಯ ಪೆರುವಾಜೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬೆಳ್ಳಾರೆ ಸಮೀಪದ ಯುವಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಉಮಿಕ್ಕಳ ನಿವಾಸಿ ಮಹಮ್ಮದ್ ರಾಝಿಕ್(16) ಎಂದು ಗುರುತಿಸಲಾಗಿದೆ.

ಕುಂಡಡ್ಕದಿಂದ ಬೆಳ್ಳಾರೆ ಹೋಗಿ ಮತ್ತೆ ಕುಂಡಡ್ಕಕ್ಕೆ ತಿರುಗಿ ಬರುತ್ತಿದ್ದ ಸಂದರ್ಭ ಹಠಾತ್ತಾಗಿ ಕಾಡುಹಂದಿಗಳ ಗುಂಪೊಂದು ರಸ್ತೆ ದಾಟಿದ್ದು ಇದನ್ನು ಕಂಡ ಸವಾರ ಬ್ರೇಕ್ ಹಾಕಿದ ಸಂದರ್ಭ ರಸ್ತೆ ಬದಿಯಲ್ಲಿದ್ದ ಮರಕ್ಕೆ ಆಕ್ಟೀವಾ ಡಿಕ್ಕಿ ಹೊಡೆದಿದ್ದು ಡಿಕ್ಕಿಯ ರಭಸಕ್ಕೆ ಹಿಂಬದಿ ಸವಾರನ ತಲೆ ಮರಕ್ಕೆ ಬಡಿದಿದ್ದು ಅದೇ ರಸ್ತೆಯಲ್ಲಿ ಬರುತ್ತಿದ್ದ ಯುವಕರು ತಕ್ಷಣ ಆಸ್ಪತ್ರೆಗೆ ಕರೆ ತಂದರಾದರು ದರ್ಬೆ ತಲುಪುವ ಹೊತ್ತಿಗೆ ಯುವಕನ ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದು ತಿಳಿದು ಬಂದಿದೆ.
ಯುವಕನು ಉಮಿಕ್ಕಳ ಟಿಂಬರ್ ರಝಾಕ್ ಅವರ ಮಗನಾಗಿದ್ದು ಮಯ್ಯತ್ ಇದೀಗ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿದ್ದು ಆಸ್ಪತ್ರೆಯ ಬಳಿ ನೂರಾರು ಸಾರ್ವಜನಿಕರು ಸೇರಿದ್ದಾರೆ ಎಂದು ತಿಳಿದು ಬಂದಿದೆ.