ಉಪ್ಪಿನಂಗಡಿ:ಲೋಕಸಭಾ ಚುನಾವಣೆಗೆಂದು ಬಳಸಲಾಗಿದ್ದ ವೆಬ್ ಕ್ಯಾಮರಾ, ಸಿಮ್, ಮೆಮೋರಿ ಕಾರ್ಡ್ ನ್ನು ಕಳ್ಳರು ದೋಚಿಕೊಂಡು ಹೋದ ಘಟನೆ ಉಪ್ಪಿನಂಗಡಿ ಸಮೀಪದ ತೆಕ್ಕಾರಿನಲ್ಲಿ ನಡೆದಿದೆ.ಈ ಬಗ್ಗೆ ಸ್ಥಳೀಯ ಪಂಚಾಯತ್ ಸಿಬ್ಬಂದಿ,ಚುನಾವಣಾ ಬೂತ್ ಲೇವಲ್ ಅಧಿಕಾರಿ ಶಿಹಾಬ್ ರವರು ಉಪ್ಪಿನಂಗಡಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ.
ತೆಕ್ಕಾರು ಇಲ್ಲಿನ ಮತಗಟ್ಟೆ ಸಂಖ್ಯೆ 228 ರಲ್ಲಿ ಲೋಕಸಭಾ ಚುನಾವಣೆಯ ಮತದಾನ ರೆಕಾರ್ಡ್ ಆಗಿದ್ದ ಕ್ಯಾಮರಾ ಮತ್ತು ಚುನಾವಣೆ ಧ್ವಜವನ್ನು ಕಳವುಗೈದಿದ್ದಾರೆ.
ಸೋಲಾರ್ ಲೈಟ್, ಮತದಾನಕ್ಕೆ ಬಳಸಿದ್ದ ಕಾಗದ ಇನ್ನಿತರ ಪೀಟೋಪಕರಣಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.
ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿದ್ದು,ಮಂಗಳೂರು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಬಗ್ಗೆ ಡಿ ಟಿವಿ ಜೊತೆ ಮಾತನಾಡಿದ ಬೂತ್ ಅಧಿಕಾರಿ ಶಿಹಾಬ್ ರವರು ಮತದಾನ ಕಳೆದು ಎರಡು ದಿನ ರಜೆಯಿತ್ತು
ಏಪ್ರಿಲ್ 29 ರಂದು ಮಧ್ಯಾಹ್ನ ಕ್ಯಾಮರಾವನ್ನು ಒಪ್ಪಿಸಲು ಬೆಳ್ತಂಗಡಿ ವಿ ಎ ಕಚೇರಿಯಿಂದ ಕರೆ ಬಂದಿದ್ದು ಆ ಸೂಚನೆಯಂತೆ ನಾನು ಶಾಲೆಗೆ ಬಂದು ಬಾಗಿಲು ತೆರೆಯುವ ವೇಳೆ ಶಾಲೆಯ ಬಾಗಿಲು ತೆರೆದ ಸ್ಥಿತಿಯಲ್ಲಿತ್ತು, ಒಳಗಡೆ ಸೋಲಾರ್ ದೀಪಗಳು ಸಹಿತ ಕಾಗದಗಲೆಲ್ಲವೂ ಚೆಲ್ಲಾಪಿಲ್ಲಿಯಾಗಿತ್ತು ಒಳಗಡೆ ಹೋಗಿ ನೋಡಿದಾಗ ಕ್ಯಾಮರಾ ಮತ್ತು ಚುನಾವಣಾ ಧ್ವಜ ಕಳವು ಆಗಿರುವ ಬಗ್ಗೆ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದರು.
ಚುನಾವಣೆ ಬೆನ್ನಲ್ಲೇ ಈ ಪ್ರಕರಣ ಬಾರೀ ಆತಂಕ ಸೃಷ್ಟಿಸಿದೆ.
ಘಟನೆ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.