ಬೆಳ್ತಂಗಡಿ, ಸೆ.14: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ 2 ವರ್ಷಕ್ಕೊಮ್ಮೆ ಆಯೋಜಿಸುವ ಸಾಂಸ್ಕೃತಿಕ ಹಾಗೂ ಪ್ರತಿಭಾ ಅನ್ವೇಷಣಾ ಕಾರ್ಯಕ್ರಮದ ಪ್ರತಿಭೋತ್ಸವ- 21 ಸಮಿತಿ ರಚನೆಯು ಜಾರಿಗೆಬೈಲ್ ನಲ್ಲಿ ನಡೆಯಿತು.
ಜಿಲ್ಲಾದ್ಯಕ್ಷ ಜಿ.ಕೆ ಇಬ್ರಾಹಿಮ್ ಅಮ್ಜದಿ ಸುಳ್ಯ, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಲಿ ತುರ್ಕಳಿಕೆ, ಕೋಶಾಧಿಕಾರಿ ಎಂ.ಶರೀಫ್ ಬೆರ್ಕಳ, ಕ್ಯಾಂಪಸ್ ಕಾರ್ಯದರ್ಶಿ ರಶೀದ್ ಮಡಂತ್ಯಾರು ಒಳಗೊಂಡ ಪ್ರತಿಭೊತ್ಸವ ಸಮಿತಿಯನ್ನು ರಾಜ್ಯ ಪಬ್ಲಿಕೇಷನ್ ಕಾರ್ಯದರ್ಶಿ ಹುಸೈನ್ ಸಅದಿ ರವರು ಘೋಷಿಸಿದರು.
ಚೇಯರ್ಮ್ಯಾನ್ ಆಗಿ ಎ.ಎಂ. ಫೈಝಲ್ ಝುಹ್ರಿ ಕಲ್ಲುಗುಂಡಿ, ಜನರಲ್ ಕನ್ವೀನರ್ ಆಗಿ ಹಕೀಂ ಕಳಂಜಿಬೈಲು
ವೈಸ್ ಚೆಯರ್ಮ್ಯಾನ್ ಆಗಿ ಕೆ.ಎಂ.ಎಚ್ ಝುಹ್ರಿ ಕೊಂಬಾಳಿ, ಮಸೂದ್ ಸಅದಿ ಗಂಡಿಬಾಗಿಲು, ಇಕ್ಬಾಲ್ ಮಾಚಾರ್,
ವೈಸ್ ಕನ್ವೀನರುಗಳಾಗಿ ಉಮರ್ ಅಮ್ಜದಿ ಕುಕ್ಕಿಲ, ಶಫೀಕ್ ಮಾಸ್ಟರ್ ತಿಂಗಳಾಡಿ, ಇಮ್ರಾನ್ ರೆಂಜಲಾಡಿ, ಫಿನಾನ್ಸಿಯಲ್ ಸಮಿತಿ ಸದಸ್ಯರಾಗಿ ಡಿ.ಕೆ.ರಶೀದ್ ಮದನಿ ಇಂದಬೆಟ್ಟು, ಸಿದ್ದೀಕ್ ಗೂನಡ್ಕ, ರಝಾಕ್ ಸಅದಿ ಕೊಡಿಪ್ಪಾಡಿ ಯವರನ್ನು ಆಯ್ಕೆ ಮಾಡಲಾಯಿತು.
ಪ್ರತಿಭೋತ್ಸವವು ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ರಾಜ್ಯದಾದ್ಯಂತ ನಡೆಯಲಿದ್ದು, ಜಿಲ್ಲಾ ಮಟ್ಟದ ಪ್ರತಿಭೋತ್ಸವ ನವಂಬರ್ ತಿಂಗಳಲ್ಲಿ ನಡೆಯಲಿದೆ
ಎಂದು ಅಧ್ಯಕ್ಷರು ತಿಳಿಸಿದರು.