';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ದಕ್ಷಿಣ ಕನ್ನಡ: ಫಾರ್ಮ್ ಹೌಸ್ ಕೆರೆಯಲ್ಲಿ ಮುಳುಗಿ ಯುವತಿಯೊಬ್ಬರು ಸಾವಿಗೀಡಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೇವು ಗ್ರಾಮದಲ್ಲಿ ನಡೆದಿದೆ. ಕೇವು ಗ್ರಾಮದಲ್ಲಿರುವ ಫಾರ್ಮ್ ಹೌಸ್ಗೆ ಕೃಷಿ ಅಧ್ಯಯನಕ್ಕಾಗಿ ಬಂದಿದ್ದ ಮಾಡೆಲ್ ಡಾ.ಮೈಜೀ ಕರೋಲ್ ಫರ್ನಾಂಡಿಸ್ (31 ವರ್ಷ) ಎನ್ನುವವರು ದುರ್ಮರಣಕ್ಕೀಡಾಗಿದ್ದು, ಮೈಜೀ ಸಾವಿನ ಬಗ್ಗೆ ಆಕೆಯ ಸಹೋದರಿ ಡಯಾನ ದೂರು ನೀಡಿದ್ದಾರೆ.
ಮಂಗಳೂರಿನ ಪ್ರಶಾಂತನಗರ ನಿವಾಸಿ ಮೈಜೀ ವೈದ್ಯಕೀಯ ಶಿಕ್ಷಣ ಮುಗಿಸಿ ಕೃಷಿ ಅಧ್ಯಯನಕ್ಕಾಗಿ ಫಾರ್ಮ್ ಹೌಸ್ಗೆ ಹೋಗಿದ್ದ ಮೈಜೀ, ಈಜುವಾಗ ಆಯ ತಪ್ಪಿ ಮುಳುಗಿ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಡಾ.ಮೈಜೀ ಕರೋಲ್ ಫರ್ನಾಂಡಿಸ್ ಸಾವಿನ ಬಗ್ಗೆ ಆಕೆಯ ಸಹೋದರಿ ಡಯಾನ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.