ಪಾಟ್ರಕೋಡಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಟ್ರಕೊಡಿಯಲ್ಲಿ ಶಾಲಾ ಪ್ರಾರಂಭೋತ್ಸವವು ಇಂದು ನಡೆಯಿತು. ಹೂ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು
ಅನಂತರ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಅಶ್ರಪ್ ಟಿ. ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸರಕಾರದಿಂದ ನೀಡುವ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಬದ್ರುನೀಷ ಪಾಟ್ರಕೊಡಿ, ಮಾಜಿ ಅದ್ಯಕ್ಷ ಜಬ್ಬರ್ ಊರ ಪ್ರಮುಖರಾದ ರಾಬರ್ಟ್ ಲಾಸ್ರದೊ, ಶಾಲಾಭಿವೃದ್ದಿ ಸಮಿತಿಯ ಸದಸ್ಯರಾದ ಅಬ್ದುಲ್ ರಜಾಕ್ ಕೆ ಪಿ., ಅಬ್ದುಲ್ ಬಶೀರ್ ಕರಿಮಜಲು, ಕಾವೇರಿ, ಸರಸ್ವತಿ, ಸೌಮ್ಯ, ಜೋಹರ ಮತ್ತು ಹಲವಾರು ಪೋಷಕರು ಶಾಲೆಯ ಎಲ್ಲಾ ಗುರುಗಳು ಭಾಗವಹಿಸಿದವರು, ಶಾಲೆಯ ಮುಖ್ಯ ಗುರುಗಳಾದ ಶರಣಪ್ಪ ರವರು ಸ್ವಾಗತಿಸಿ, ಅರಂಭಿಕ ಮಾತುಗಳನ್ನು ನುಡಿದರು.ತಾಲೂಕು ಪಂಚಾಯತ್ ಸದಸ್ಯ ಹಾಗು ಶಾಲಾಭಿವೃದ್ದಿ ಸಮಿತಿಯ ಮಾಜಿ ಅದ್ಯಕ್ಷರಾದ ಅದಂ ಕುಂಞ ಹಾಜಿಯವರು ಇಂದು ಶಾಲೆಗೆ ಆಗಮಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವರದಿ: ಅಬ್ದುಲ್ ಖಾದರ್ ಪಾಟ್ರಕೊಡಿ