ಇಂಡಿಯನ್ ಪ್ರೀಮಿಯರ್ ಲೀಗ್ ಮೇಲೆ ಮತ್ತೊಮ್ಮೆ ಕೊರೋನಾ ಕಾರ್ಮೋಡ ಕವಿದಿದೆ. ಐಪಿಎಲ್ ಸೀಸನ್ 14 ಮೊದಲಾರ್ಧದ ವೇಳೆ ಆಟಗಾರರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟೂರ್ನಿಯನ್ನು ಮುಂದೂಡಲಾಗಿತ್ತು. ಇದೀಗ ಟೂರ್ನಿಯ ದ್ವಿತಿಯಾರ್ಧ ಆರಂಭವಾಗಿ ಎರಡು ದಿನಗಳಲ್ಲೇ ಸನ್ರೈಸರ್ಸ್ ಹೈದರಾಬಾದ್ ಆಟಗಾರ ಟಿ ನಟರಾಜನ್ ಅವರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇದೀಗ ನಟರಾಜನ್ ಅವರನ್ನು ತಂಡದ ಉಳಿದ ಆಟಗಾರರಿಂದ ಪತ್ಯೇಕಿಸಲಾಗಿದ್ದು, ಹಾಗೆಯೇ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಹೈದರಾಬಾದ್‌ನ ಆರು ಸದಸ್ಯರನ್ನು ಕೂಡ ಪ್ರತ್ಯೇಕವಾಗಿ ಇರಿಸಲಾಗಿದೆ.
ಅದರಂತೆ ಎಸ್ಆರ್ಹೆಚ್ ತಂಡದ ಆಲ್ರೌಂಡರ್ ವಿಜಯ್ ಶಂಕರ್, ತಂಡದ ಮ್ಯಾನೇಜರ್ ವಿಜಯ್ ಕುಮಾರ್, ಫಿಸಿಯೋಥೆರಪಿಸ್ಟ್ ಶ್ಯಾಮ್ ಸುಂದರ್, ಡಾ ಅಂಜನಾ ವನನ್, ಲಾಜಿಸ್ಟಿಕ್ಸ್ ಮ್ಯಾನೇಜರ್ ತುಷಾರ್ ಖೇಡ್ಕರ್ ಮತ್ತು ನೆಟ್ ಬೌಲರ್ ಪೆರಿಯಸ್ವಾಮಿ ಗಣೇಶನ್ ಅವರನ್ನು ಪತ್ಯೇಕವಾಗಿ ಇರಿಸಲಾಗಿದೆ. ಇದಾಗ್ಯೂ ಇಂದಿನ ಪಂದ್ಯವನ್ನು ನಡೆಸಲಾಗುವುದು ಎಂದು ಐಪಿಎಲ್ ಆಡಳಿತ ಮಂಡಳಿ ತಿಳಿಸಿದೆ.
ಹೀಗಾಗಿ ಇಂದಿನ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ವಿಜಯ್ ಶಂಕರ್ ಹಾಗೂ ಟಿ ನಟರಾಜನ್ ಕಣಕ್ಕಿಳಿಯುವುದಿಲ್ಲ. ಇವರ ಬದಲಿಗೆ ಯುವ ಆಟಗಾರರಿಗೆ ಚಾನ್ಸ್ ಸಿಗುವ ಸಾಧ್ಯತೆಯಿದೆ. ಏಕೆಂದರೆ ಎಸ್ಆರ್ಹೆಚ್ ತಂಡದಲ್ಲಿ ಭಾರತೀಯ ಆಟಗಾರರ ದಂಡೇ ಇದೆ. ಆಲ್ರೌಂಡರ್ಗಳಾಗಿ ಅಭಿಷೇಕ್ ಶರ್ಮಾ, ಜೆ ಸುಚಿತ್, ಅಬ್ದುಲ್ ಸಮದ್, ಕೇದರ್ ಜಾಧವ್ ಇದ್ದು, ಇವರಲ್ಲಿ ಒಬ್ಬರು ವಿಜಯ್ ಶಂಕರ್ ಸ್ಥಾನದಲ್ಲಿ ಕಣಕ್ಕಿಳಿಯಲಿದ್ದಾರೆ. ಕಳೆದ ಬಾರಿಯ ಫಾರ್ಮ್ ಹಾಗೂ ಈ ಪ್ರದರ್ಶನಕ್ಕೆ ಒತ್ತು ನೀಡುವುದಾದರೆ ವಿಜಯ್ ಶಂಕರ್ ಸ್ಥಾನದಲ್ಲಿ ಅಭಿಷೇಕ್ ಶರ್ಮಾ ಅಥವಾ ಜೆ ಸುಚಿತ್ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚು. ದುಬೈನಲ್ಲಿ ಸಂಜೆ ನಡೆಯುವ ಪಂದ್ಯ ನಿಗದಿತ ಸಮಯದಲ್ಲಿ ನಡೆಯಲಿದೆ