ಬೆಳ್ಳಾರೆ: ರಕ್ತ ಚಂದನದ ಮರಗಳನ್ನು ಕಡಿದು, ಅದರ ದಿಮ್ಮಿಗಳನ್ನು ಶೇಖರಿಸಿದ್ದ ಮನೆಯೊಂದಕ್ಕೆ ಅರಣ್ಯ ಇಲಾಖೆ ದಾಳಿ ನಡೆಸಿದ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆಯ ಬಾಳಿಲದಲ್ಲಿ ನಡೆದಿದೆ.
ಮಾರಾಟ ಮಾಡುವ ಉದ್ದೇಶದಿಂದಾಗಿ ಬಾಳಿಲದ ಶೆಡ್ ನಲ್ಲಿ ಆರೋಪಿಗಳು ರಕ್ತ ಚಂದನದ ಮರಗಳನ್ನು ಕಡಿದು ದಿಮ್ಮಿಗಳನ್ನಾಗಿ ಪರಿವರ್ತಿಸಿ ಶೇಖರಿಸಿದ್ದ ಬಗ್ಗೆ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿದ್ದಾರೆ.
ಸುಮಾರು 260 ಕೆ.ಜಿ .ಯ ರಕ್ತ ಚಂದನ ಮರಗಳ 40 ದಿಮ್ಮಿಗಳು ಅಂದಾಜು ಮೌಲ್ಯ 26,00,000 ಲಕ್ಷದ ಸ್ವತ್ತನ್ನು ಹಾಗೂ ಆರೋಪಿಗಳನ್ನು ವಶಪಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಬಂಧಿತರನ್ನು ಸುಳ್ಯ ತಾಲೂಕು ಬಾಳಿಲ ನಿವಾಸಿ ಅಬ್ದುಲ್ಲಾ(51) ಮತ್ತು ಪುತ್ತೂರು ತಾಲೂಕು ಮಾಡಾವು ನಿವಾಸಿ ಹಮೀದ್ ಕೆ ಎಂದು ತಿಳಿದು ಬಂದಿದೆ.
ಕಾರ್ಯಚರಣೆಯಲ್ಲಿ ಚಿಕ್ಕಮಗಳೂರು ವಿಶೇಷ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪ ನಿರೀಕ್ಷಕರಾದ ಶೋಭಾ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ದೇವರಾಜ , ದಿವಾಕರ , ಕೃಷ್ಣ ರಾಜ್ ಅರಸ್ , ದಿನೇಶ , ದಿಲೀಪ , ಹಾಲೇಶ ಹಾಗೂ ಚಾಲಕರಾದ ತಿಮ್ಮ ಶೆಟ್ಟಿ ಪಾಲ್ಗೊಂಡಿದ್ದರು .