ಕೇಂದ್ರ ಸರಕಾರದ ರೈತ ವಿರೋಧಿ ಮೂರು ಮಸೂದೆಗಳನ್ನು, ಕಾರ್ಮಿಕ ವಿರೋಧಿ ತಿದ್ದುಪದಿಗಳನ್ನು ಹಿಂಪಡೆಯಬೇಕು, ಸಾರ್ವಜನಿಕರ ದಿನಬಳಕೆ ಅಗತ್ಯ ವಸ್ತುಗಳಾದ ಅಡುಗೆ ಅನಿಲ, ಪೆಟ್ರೋಲ್, ಡಿಸೆಲ್, ಆಹಾರ ಪದಾರ್ಥಗಳ ಬೆಲೆಯೇರಿಕೆ ವಿದ್ಯುತ್ ಹಾಗು ಸಾರ್ವಜನಿಕ ರಂಗಗಳನ್ನು ಮಾರಾಟ ಮಾಡುತ್ತಿರುವ ಕೇಂದ್ರ ಬಿಜೆಪಿ ಸರಕಾರದ ವಿರುದ್ದ ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ಹಾಗೂ ವಿವಿದ ಸಂಘಟನೆಗಳ ನೆತ್ರತ್ವದಲ್ಲಿ ರಸ್ತೆ ತಡೆ ಹಾಗೂ ಪ್ರತಿಭಟನೆ ಸೆಪ್ಟೆಂಬರ್ 27 ರಂದು ಬೆಳ್ತಂಗಡಿಯ ಮೂರು ಮಾರ್ಗ ಜಂಕ್ಷನ್ ನಲ್ಲಿ ನಡೆಯಿತು.
ಈ ಸಂದರ್ಬದಲ್ಲಿ ಮಾಜಿ ಶಾಸಕರಾದ ಶ್ರಿ ಕೆ ವಸಂತ ಬಂಗೇರ, ಬೆಳ್ತಂಗಡಿ ನಗರ ಬ್ಲಾಕ್ ಅಧ್ಯಕ್ಷರಾದ ಶ್ರೀ ಶೈಲೇಶ್ ಕುಮಾರ್, ಗ್ರಾಮೀಣ ಬ್ಲಾಕ್ ಅಧ್ಯಕ್ಷ್ರರಾದ ರಂಜನ್ ಜಿ ಗೌಡ, ಉಭಯ ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷರುಗಳಾದ ದಿನೇಶ್ ಕೊಟ್ಯಾನ್, ಸತೀಶ್ ಶೆಟ್ಟಿ, ಕೆಪಿಸಿಸಿ ಕಾರ್ಮಿಕ ಸಂಘಟನೆಯ ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಪಡ್ಪು, ಕಾರ್ಮಿಕ ಸಂಘಟನೆಯ ಮುಖಂಡರಾದ ಬಿ.ಎಂ ಭಟ್, ಎ ಪಿ ಎಮ್ ಸಿ ಅಧ್ಯಕ್ಷರಾದ ಚಿದಾನಂದ, ರೈತ ಮುಖಂಡ ಸುರೇಶ್ ಭಟ್, ರೈತ ಮುಖಂಡರಾದ ಶ್ಯಾಮ್ ರಾಜ್ ,ದನಂಜಯ ಗೌಡ. ಸೆಬಾಸ್ಟಿನ್, ಸಲಿಂ, ಜಯರಾಮ್ ಮಯ್ಯ,ಪ.ಪಂ ಸದಸ್ಯ ಜಗದೀಶ್ ಡಿ, ಜನಾರ್ದನ, ಮುಖಂಡರಾದ ಬಾಲಕ್ರಷ್ಣ ಉಜಿರೆ, ಕುಶಾಲಪ್ಪ ಶಿರ್ಲಾಲು, ನೆಬಿಸಾ, ಡೊಂಬಯ್ಯ ಗೌಡ,ರಾಮಚಂದ್ರ, ಯುವರಾಜ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು,