ಗದಗ: 1925 ರಲ್ಲಿಯೇ ಆರ್‌ಎಸ್‌ಎಸ್ ಅಸ್ತಿತ್ವದಲ್ಲಿತ್ತು. ಆಗ ದೇವೆಗೌಡರು ಹುಟ್ಟಿರಲಿಲ್ಲ. ಹೀಗಾಗಿ ದೇವೆಗೌಡರ ಮೂಲಕ ಆರ್‌ಎಸ್‌ಎಸ್‍ಗೆ ಪ್ರಭಾವ ಬೆಳೆಸುವ ಅವಶ್ಯಕತೆ ಇಲ್ಲ ಎಂದು ಹೆಚ್.ಡಿ ದೇವೆಗೌಡ ಹಾಗೂ ಕುಮಾರಸ್ವಾಮಿ ವಿರುದ್ಧ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.ಗದಗನ ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿ ಶ್ರೀ ಪುಟ್ಟರಾಜ ಕವಿ ಗವಾಯಿಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾನಾಡಿದ ಅವರು, ಆರ್‌ಎಸ್‌ಎಸ್ ಬಗ್ಗೆ ಗೊತ್ತಿಲ್ಲ. ಬಿಜೆಪಿ ಈ ರೀತಿ ಬಿಂಬಿಸುತ್ತಿದೆ ಅನ್ನೋ ದೇವೇಗೌಡರ ಹೇಳಿಕೆಗೆ, ದೇವೇಗೌಡರ ಮೂಲಕ ಆರ್‌ಎಸ್‍ಎಸ್‍ಗೆ ವಿಶೇಷ ಪ್ರಭಾವ ಬೆಳೆಯುವ ಅವಶ್ಯಕತೆ ಇಲ್ಲ. ದೇವೆಗೌಡರು ಹುಟ್ಟುವ ಮುಂಚೆಯೇ ಆರ್‌ಎಸ್‌ಎಸ್ ಅಸ್ತಿತ್ವದಲ್ಲಿದೆ. ದೇವೇಗೌಡರ ಮಕ್ಕಳು, ಮೊಮ್ಮಕ್ಕಳು ಆನಂದವಾಗಿ ರಾಜಕಾರಣ ಮಾಡಲಿ ಅಂತ ವ್ಯಂಗ್ಯವಾಡಿದ್ದಾರೆ.
ರಾಜ್ಯದ ಜನ ಜೆಡಿಎಸ್ ಅನ್ನು ಮರೆಯುತ್ತಿದ್ದಾರೆ. ಮುಸ್ಲಿಂಮರನ್ನು ಸಂತೃಪ್ತಿ ಪಡಿಸಿದಂಗೂ ಆಯ್ತು, ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದರೆ ಪ್ರಚಾರ ಸಿಗುತ್ತದೆ ಎಂಬ ಭ್ರಮೆಯಲ್ಲಿ ಜೆಡಿಎಸ್‍ನ್ನು ಟೀಕಿಸುತ್ತಿದೆ ಅಂತಾ ತಮ್ಮ ಎಂದಿನ ದಾಟಿಯಲ್ಲೇ ಚಾಟಿ ಬೀಸಿದ್ದಾರೆ. ಸೂರ್ಯನಿಗೆ ಬೈದರೆ ದೊಡ್ಡವನಾಗುತ್ತೇನೆ ಎಂಬ ಭ್ರಮೆಯಲ್ಲಿ ಕೆಲವರಿರ್ತಾರೆ.
ಹಾಗೆಯೇ ಕುಮಾರಸ್ವಾಮಿ ಇದ್ದಾರೆ. ಕುಮಾರಸ್ವಾಮಿ ಎಲ್ಲಿ? ಆರ್‌ಎಸ್‌ಎಸ್ ಎಲ್ಲಿ? ಕಾಶ್ಮೀರ ಪಂಡಿತರ ಸಾವಿಗೆ ಆರ್‍ಎಸ್‍ಎಸ್ ಕಾರಣ ಅಂತಾರೆ. ಇಷ್ಟು ಕೀಳು ಮಟ್ಟದ ರಾಜಕಾರಣಕ್ಕೆ ಕುಮಾರಸ್ವಾಮಿ ಇಳೀತಾರೆ ಎಂದು ಅಂದುಕೊಂಡಿರಲಿಲ್ಲ. ಕುಮಾರಸ್ವಾಮಿಗೆ ಭಗವಂತ ಬುದ್ಧಿ ಕೊಡಲಿ ಅಂತಾ ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.