ಪುತ್ತೂರು: ಪೋಲಿಯೋ ನಿರ್ಮೂಲನೆಯ ಜಾಗ್ರತಿಯನ್ನ ರೂಪಿಸುವ ನಿಟ್ಥಿನಲ್ಲಿ ವಿಶ್ವದಾದ್ಯಂತ ರೋಟರಿ ಕ್ಲಬ್ ಗಳು ಸೇರಿಕೊಂಡು ಉಚಿತ ಲಸಿಕೆಯನ್ನು ಜಗತ್ತಿನಾದ್ಯಂತ ನೀಡುತ್ತಿದ್ದು ಪ್ರಪಂಚದಾದ್ಯಂತ ಪೊಲಿಯೋ ನಿರ್ಮೂಲನೆಯಾಗುತ್ತಿದೆ. ಈ ನಿಟ್ಟಿನಲ್ಲಿ ದಿನಾಂಕ 24-10-2021 ಆದಿತ್ಯವಾರ ಬೆಳಿಗ್ಗೆ 7.30 ಕ್ಕೆ ಪುತ್ತೂರಿನ ಬೊಳ್ವಾರ್ ತಿರುಮಲ ಸೈಕಲ್ ಶಾಪ್ ನಲ್ಲಿಂದ ಪುತ್ತೂರು ಬೈಪಾಸ್ ಮೂಲಕ ದರ್ಬೆ ಪ್ರವೇಶಿಸಿ ಮುಖ್ಯರಸ್ತೆಯ ಮೂಲಕ ಸಾಗಿಕೊಂಡು ಪುತ್ತೂರಿನ 7 ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಪೋಲಿಯೋ ನಿರ್ಮೂಲನಾ ಜಾಗೃತಿಗಾಗಿ ಸೈಕಲ್ ಜಾಥಾ ನಡೆಯಲಿದೆ.
ಪುತ್ತೂರಿನ 7 ರೋಟರಿ ಕ್ಲಬ್ ಗಳಾದ ರೋಟರಿ ಕ್ಲಬ್ ಪುತ್ತೂರು, ರೋಟರಿ ಕ್ಲಬ್ ಪುತ್ತೂರು ಈಸ್ಟ್, ರೋಟರಿ ಕ್ಲಬ್ ಪುತ್ತೂರು ಸಿಟಿ ರೋಟರಿ ಕ್ಲಬ್ ಯುವ,ರೋಟರಿ ಕ್ಲಬ್ ಸ್ವರ್ಣ, ರೋಟರಿ ಕ್ಲಬ್ ಸೆ೦ಟ್ರಲ್, ರೋಟರಿ ಕ್ಲಬ್ ಎಲೈಟ್,ಮರೀಲ್ ನಲ್ಲಿರುವ ಪುತ್ತೂರು ಕ್ಲಬ್, ಆರೋಗ್ಯ ಇಲಾಖೆ ಪುತ್ತೂರು ಸಹಬಾಗಿತ್ವದಲ್ಲಿ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಸಾರಥ್ಯದಲ್ಲಿ ಬೊಳ್ವಾರ್ ತಿರುಮಲ ಸೈಕಲ್ ಪ್ರಾಯೋಜಕತ್ವದಲ್ಲಿ ಸೈಕಲ್ ಜಾಥಾ ನಡೆಯಲಿದೆ,
ಈ ಕಾರ್ಯಕ್ರಮವನ್ನು ಸಹಾಯಕ ಆಯುಕ್ತರಾದ ಯತೀಶ್ ಉಲ್ಲಾಲ್ ಉದ್ಘಾಟಿಸಲಿದ್ದಾರೆ
ರೋಟರಿ ಪಿಡಿಜಿ ಡಾ ರೋ ಬಾಸ್ಕರ್,ಮತ್ತು ಅಸಿಸ್ಟ೦ಟ್ ಗವರ್ನರ್ ರೋ ಸುರೇಂದ್ರ ಕಿಣಿಯವರು ಅಥಿತಿಗಳಾಗಿ ಆಗಮಿಸಲಿದ್ದಾರೆ
ಈ ಜಾಥದಲ್ಲಿ ಸಾರ್ವಜನಿಕರು ತಮ್ಮ ಸೈಕಲ್ ನೊಂದಿಗೆ ಹೆಚ್ಚಿನ ಸಂಖೆಯಲ್ಲಿ ಭಾಗವಹಿಸಬಹುದಾಗಿದೆ.
ಸೈಕಲ್ ಜಾಥಾಕ್ಕೆ ಬರುವವರು ಬಿಳಿ ಟೀ ಶರ್ಟ್ ದರಿಸಿ ಬರಬೇಕೆಂದು ಸಂಘಟಕರು ವಿನಂತಿಸಿದ್ದಾರೆ,
ಈ ಸಂದರ್ಭದಲ್ಲಿ ಪುತ್ತೂರಿನಲ್ಲಿ ಹಲವಾರು ವರ್ಷದಿಂದ ಸೈಕಲ್ ತುಳಿದುಕೊಂಡು ಉದ್ಯೋಗಕ್ಕೆ ಹೋಗುತ್ತಿರುವ ಜಗದೀಶ್ ಪ್ರಭುರವರನ್ನು ಗೌರವಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>