dtvkannada

'; } else { echo "Sorry! You are Blocked from seeing the Ads"; } ?>

ಮೈಸೂರು: ಮಳೆಯ ನೀರು ನೋಡುತ್ತಿದ್ದ ವ್ಯಕ್ತಿಯೊಬ್ಬರು ಕಾಲು ಜಾರಿ ಮೋರಿಯಲ್ಲಿ ಕೊಚ್ಚಿಹೋದ ದುರ್ಘಟನೆ ಭಾನುವಾರ ತಡರಾತ್ರಿ ಮೈಸೂರಿನ ಕಾರಂಜಿ ಕೆರೆಗೆ ಸಂಪರ್ಕ ಕಲ್ಪಿಸುವ ಕಾಲುವೆಯಲ್ಲಿ ನಡೆದಿದೆ.

ಸಿದ್ಧಾರ್ಥ ನಗರದ ವಿನಯ ಮಾರ್ಗದ ನಿವಾಸಿ ಎಂ.ಚಂದ್ರೇಗೌಡ (60 ವ) ನೀರಿನಲ್ಲಿ ಕೊಚ್ಚಿಹೋದ ವ್ಯಕ್ತಿ.

'; } else { echo "Sorry! You are Blocked from seeing the Ads"; } ?>

ಮನೆ ಪಕ್ಕದ ಮೋರಿಯಲ್ಲಿ ನಿಂತು ನೀರು ವೀಕ್ಷಣೆ ಮಾಡುತ್ತಿದ್ದ ಚಂದ್ರೇಗೌಡ ಕಾಲು ಜಾರಿ ಮೋರಿಗೆ ಬಿದ್ದಿದ್ದಾರೆ. ಕುಟುಂಬಸ್ಥರ ಕಣ್ಣೆದುರೇ ನೀರುಪಾಲಾಗಿದ್ದಾರೆ. ಈ ವೇಳೆ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಸುರಿಯುತ್ತಿದ್ದ ಮಳೆಯಲ್ಲೂ ಸಿಬ್ಬಂದಿ ಕಾರ್ಯಚರಣೆಗೆ ಮುಂದಾದರೂ ನೀರಿನಲ್ಲಿ ಕೊಚ್ಚಿಹೋದ ವ್ಯಕ್ತಿ ಸುಳಿವು ಸಿಕ್ಕಿಲ್ಲ.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!