dtvkannada

ಪುತ್ತೂರು, ಅ.27: ಆರ್ಯಾಪು ಗ್ರಾಮ ಪಂಚಾಯತಿ ವ್ಯಾಪ್ತಿಯ ವಳತ್ತಡ್ಕ ವಾರ್ಡಿನ ವಿವಿಧ ಬೇಡಿಕೆ ಈಡೇರಿಸಲು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯ ( SDPI) ವಳತ್ತಡ್ಕ ಬೂತ್ ಸಮಿತಿ ವತಿಯಿಂದ ಆರ್ಯಾಪು ಗ್ರಾಮ ಪಂಚಾಯಿತಿಗೆ ಮನವಿ ನೀಡಲಾಯಿತು.

ವಳತ್ತಡ್ಕ- ಪಿಲಿಪಂಜರ ಸಂಪರ್ಕ ರಸ್ತೆಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆ ನೀರು , ಮಣ್ಣು ರಸ್ತೆಯಲ್ಲಿ ರಾಶಿಯಾಗಿದ್ದು ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಇಲ್ಲಿ ಸಮರ್ಪಕ ಕಾಂಕ್ರೀಟ್ ಚರಂಡಿ ನಿರ್ಮಾಣ ಮಾಡಿ ಸಮಸ್ಯೆ ಬಗೆಹರಿಸಬೇಕಾಗಿ ಮನವಿ ಮಾಡಲಾಯಿತು.

ಕುಂಜೂರು ಪಂಜ- ದೇವಸ್ಯ- ಪಿಲಿಪಂಜರ – ವಳತ್ತಡ್ಕ – ಡೆಂಜಿಬಾಗಿಲು ರಸ್ತೆಯಲ್ಲಿ ದಾರಿದೀಪದ ಅವಶ್ಯಕತೆಯಿದ್ದು ಕೂಡಲೇ ದಾರಿದೀಪ ಅಳವಡಿಸಬೇಕಾಗಿ ಕೋರಲಾಗಿದೆ.
ಅದೇ ರೀತಿ ವಳತ್ತಡ್ಕ ವಾರ್ಡಿನ ದೇವಸ್ಯ ಜಂಕ್ಷನ್ ಸೂಕ್ಷ್ಮ ಪ್ರದೇಶ ಆಗಿರುವುದರಿಂದ ಇಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಬೇಕೆಂದು ಒತ್ತಾಯಿಸಲಾಗಿದೆ.
ಅಲ್ಲದೇ ಕುಂಜೂರು ಪಂಜ- ದೇವಸ್ಯ- ಪಿಲಿಪಂಜರ – ವಳತ್ತಡ್ಕ – ಡೆಂಜಿಬಾಗಿಲು ಪರಿಸರದಲ್ಲಿ ಹುಚ್ಚು ನಾಯಿ ಹಾವಳಿಯಿಂದ ಹಲವಾರು ಜನರಿಗೆ ನಾಯಿ ಕಚ್ಚಿ ಗಾಯಗೊಂಡಿದ್ದು ಈಗಾಗಲೇ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಭಾಗದ ಜನರು ಆತಂಕಕ್ಕೀಡಾಗಿದ್ದು ದಾರಿಯಲ್ಲಿ ನಡೆದಾಡಲೂ ಭಯಭೀತರಾಗಿದ್ದಾರೆ.ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಕೋರಲಾಯಿತು.

ಈ ಸಂದರ್ಭದಲ್ಲಿ ಎಸ್ ಡಿಪಿಐ ವಳತ್ತಡ್ಕ ಬೂತ್ ಅಧ್ಯಕ್ಷರಾದ ಶರೀಫ್ ಪಂಜ, ಉಪಾಧ್ಯಕ್ಷರಾದ ರಿಯಾಝ್ ವಳತ್ತಡ್ಕ , ಕಾರ್ಯದರ್ಶಿ ಮುನೀರ್, ಹಾಗೂ ಸಿರಾಜ್ , ಝಾಹಿರ್, ಸಿಯಾಬುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.

By dtv

Leave a Reply

Your email address will not be published. Required fields are marked *

error: Content is protected !!