ನೆಲ್ಯಾಡಿ: ಅನ್ಯಧರ್ಮದ ಯುವತಿಯನ್ನು ಬೆದರಿಸಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ಪದೇ ಪದೇ ಕಿರುಕುಳ ನೀಡುವ ಆರೋಪದಡಿಯಲ್ಲಿ ಆಟೋ ಚಾಲಕನನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ.
ನೆಲ್ಯಾಡಿಯಲ್ಲಿ ರಿಕ್ಷಾ ಚಾಲಕನಾಗಿರುವ ಹೊಸಮಜಲು ನಿವಾಸಿ ನೌಫಲ್ ವಿರುದ್ಧ ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ನೇಲ್ಯಡ್ಕ ನಿವಾಸಿಯಾಗಿರುವ ಯುವತಿ ದೂರು ನೀಡಿದ್ದಾಳೆ. ಯುವತಿಯ ದೂರಿನ ಮೇರೆಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಬಾಲಕಿ ಮೂರು ವರ್ಷದ ಹಿಂದೆ ನೆಲ್ಯಾಡಿಯ ಖಾಸಗಿ ವಿದ್ಯಾಸಂಸ್ಥೆಯೊಂದರ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆ ಸಂದರ್ಭ ಆರೋಪಿ ನೌಫಲ್ ಆಕೆಯ ಪರಿಚಯ ಮಾಡಿಕೊಂಡು ಮೊಬೈಲ್ ನಂಬರ್ ಪಡೆದುಕೊಂಡು ಪದೇ ಪದೇ ಕರೆ ಮಾಡಿ ಮಾತನಾಡುತ್ತಿದ್ದ. ಆರೋಪಿಯು 15-02-2018 ರಂದು ಬಾಲಕಿಯ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಆಕೆಯ ಮೈಮೇಲೆ ಕೈ ಹಾಕಿ ಒತ್ತಾಯ ಪೂರ್ವಕವಾಗಿ ಆಕೆಯ ಬಟ್ಟೆಗಳನ್ನು ಬಿಚ್ಚಿ ಸಂಭೋಗ ಮಾಡಿದ್ದಾನೆ. ಈ ವೇಳೆ ಆಕೆಯ ಬೆತ್ತಲೆ ಫೊಟೋಗಳನ್ನು ತೆಗೆದು ನೀನು ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ನಿನ್ನ ಬೆತ್ತಲೆ ಫೊಟೋಗಳನ್ನು ಸ್ನೇಹಿತರೆಲ್ಲರಿಗೂ ಕಳುಹಿಸುತ್ತೇನೆ ಎಂದು ಬೆದರಿಸಿದ್ದಾನೆ. ಇದಾದ ನಂತರ ಆರೋಪಿಯು ೨೫-೯-೨೦೨೧ರಂದು ಬಾಲಕಿಯ ಮನೆಯಲ್ಲಿ ಯಾರು ಇಲ್ಲದ ವಿಚಾರವನ್ನು ತಿಳಿದುಕೊಂಡು ಆಟೋ ರಿಕ್ಷಾದಲ್ಲಿ ಮನೆಗೆ ತೆರಳಿ ಬಾಲಕಿಯ ಒಪ್ಪಿಗೆ ಇಲ್ಲದೇ ಸಂಭೋಗ ಮಾಡಿದ್ದಾನೆ.
ವಿದ್ಯಾರ್ಥಿನಿ 2020 ರಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮಂಗಳೂರಿನ ಕಾಲೇಜೊಂದಕ್ಕೆ ತೆರಳಿದ್ದು ಅಲ್ಲಿ ಸಂಬಂಧಿಕರ ಮನೆಯಲ್ಲಿ ಉಳಕೊಳ್ಳುತ್ತಿದ್ದರು. ಈ ವಿಚಾರವನ್ನು ತಿಳಿದುಕೊಂಡಿದ್ದ ಆರೋಪಿಯು ಆಕೆಗೆ ಕರೆ ಮಾಡಿ ಸಿಗುವಂತೆ ಒತ್ತಾಯಿಸಿದ್ದು ಇದಕ್ಕೆ ನಿರಾಕರಿಸಿದಾಗ ಬೆತ್ತಲೆ ಚಿತ್ರಗಳನ್ನು ಎಲ್ಲರಿಗೂ ತೋರಿಸುವುದಾಗಿ ಬೆದರಿಕೆಯೊಡ್ಡಿದ್ದ. 20-02-2021ರಂದು ಬೆಳಿಗ್ಗೆ ಆರೋಪಿಯು ಕಾರಿನಲ್ಲಿ ಮಂಗಳೂರಿಗೆ ಬಂದು ಮಾಲ್‌ಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿ ಅಲ್ಲಿಗೇ ಹೋಗದೇ ಸುರತ್ಕಲ್‌ನ ವಸತಿಗೃಹವೊಂದಕ್ಕೆ ಕರೆದುಕೊಂಡು ಹೋಗಿ ಸಂಭೋಗ ಮಾಡಿದ್ದಾನೆ.
ನ.2ರಂದು ಬೆಳಿಗ್ಗೆ ನೌಫಲ್ ಮತ್ತೆ ಕರೆ ಮಾಡಿ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ್ದು ಇದರಿಂದ ಬೇಸತ್ತು ಬಾಲಕಿ ಈ ವಿಚಾರವನ್ನು ತಂದೆ ತಾಯಿಗೆ ತಿಳಿಸಿದ್ದಾಳೆ. ಆರೋಪಿಯು ಒಪ್ಪಿಗೆ ಇಲ್ಲದೆ ಬೆದರಿಸಿ ಪದೇ ಪದೇ ಲೈಂಗಿಕ ಸಂಪರ್ಕ ಮಾಡಿರುತ್ತಾನೆ ಎಂದು ಆರೋಪಿಸಿ ನ.2ರಂದು ಬಾಲಕಿ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ