ಮೂಡುಬಿದಿರೆ: ಪುತ್ತಿಗೆ ಪಂಚಯಾತ್ ವ್ಯಾಪ್ತಿಯ ಕಂಚಿಬೈಲು ಬಳಿ ಸಿಡಿಲು ಬಡಿದು ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ಸೋಮವಾರ ಸಂಜೆ ನಡೆದಿದೆ.
ಸಿಡಿಲು,ಗುಡುಗು,ಮಿಂಚು ಮಳೆ ಧಾರಕಾರವಾಗಿ ಬರುತ್ತಿದ್ದ ಸಂದರ್ಭದಲ್ಲಿ ಹೊರಗಡೆಯಿದ್ದ ಯಶವಂತ (26) ಮಣಿಪ್ರಸಾದ (25) ಸಿಡಿಲು ಬಡಿದು ಮೃತಪಟ್ಟಿದ್ದಾರೆ.ಇವರ ಜೊತೆಗಿದ್ದ ಮೂವರು ತೀವ್ರವಾಗಿ ಅಸ್ವಸ್ಥರಾಗಿದ್ದು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.