ಉಪ್ಪಿನಂಗಡಿ: ನಿನ್ನೆ ರಾತ್ರಿ ಉಪ್ಪಿನಂಗಡಿಯಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕಿನಾದ್ಯಂತ ಡಿ.15 ರಿಂದ ಡಿ.17ರ ಮಧ್ಯರಾತ್ರಿ ಗಂಟೆ 12ರ ತನಕ ನಿಷೇದಾಜ್ಞೆಯನ್ನು ವಿಧಿಸಿ ಪುತ್ತೂರು ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್ ಆದೇಶ ಹೊರಡಿಸಿದ್ದಾರೆ.
ಸದ್ರಿ ವರದಿಯನ್ನು ಸಹಾಯಕ ಕಮೀಷನರ್ ಅವರು ಪರಿಶೀಲಿಸಿ ಪುತ್ತೂರು ಉಪವಿಭಾಗ ಮಟ್ಟದಲ್ಲಿ ಯಾವುದೇ ರೀತಿ ಕೋಮು ಗಲಭೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಿ.ಆರ್.ಪಿ.ಸಿ ಕಲಂ 144 ಪ್ರಕಾರ ನಿಷೇದಾಜ್ಞೆ ಹೊರಡಿಸುವುದು ಸೂಕ್ತ ಎಂದು ಅಭಿಪ್ರಾಯಿಸಿ ದಂಡ ಪ್ರಕ್ರಿಯಾ ಸಂಹಿತೆ 1973 ಕಲಂ 144 ರನ್ವಯ ಪ್ರದತ್ತ ಅಧಕಾರ ಚಲಾಯಿಸಿ ಪುತ್ತೂರು ಉಪವಿಭಾಗದಾದ್ಯಂತ ನಿಷೇದಾಜ್ಞೆಯನ್ನು ವಿಧಿಸಿ ಆದೇಶ ಹೊರಡಿಸಿದ್ದಾರೆ.
ನಿಷೇದಾಜ್ಞೆ ಜಾರಿಯಾದ ಹಿನ್ನಲೆ PFI ವತಿಯಿಂದ ಪುತ್ತೂರು ಹಾಗೂ ಬೆಳ್ತಂಗಡಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಮುಂದೂಡಲಾಗಿದೆ.
https://www.facebook.com/265293395351673/posts/323457662868579/?d=n