ಪುತ್ತೂರು: ಕೋರ್ಟ್ ರಸ್ತೆಯಲ್ಲಿರುವ ಬಾವಾ ಜ್ಯುವೆಲ್ಲರ್ಸ್ ನ ಮುಂಭಾಗದಲ್ಲಿ ಬಿದ್ದು ಸಿಕ್ಕಿದ ಒಂದೂವರೆ ಲಕ್ಷದಷ್ಟು ಮೌಲ್ಯವಿರುವ ಚಿನ್ನಾಭರಣವನ್ನು ಅದರ ವಾರೀಸುದಾರರಿಗೆ ಮರಳಿಸಿ ಸಣ್ಣ ಪ್ರಾಯದ ಹೆಣ್ಣು ಮಗುವೊಂದು ಪ್ರಾಮಾಣಿಕತೆ ಮೆರೆದಿದೆ.

ಪುತ್ತೂರಿನ ಕೋರ್ಟ್ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಅಬೂಬಕ್ಕರ್ ಸಾದಿಕ್ ಮಾಲಕತ್ವದ ಬಾವಾ ಜ್ಯುವೆಲ್ಲರಿ ಮಳಿಗೆಯ ಮುಂಭಾಗ ಸುಮಾರು ಮೂರುವರೆ ಪವನ್ (28 Gram) ಚಿನ್ನ ಬಿದ್ದಿತ್ತು. ಮಳಿಗೆಗೆ ಬಂದಿದ್ದ ಗ್ರಾಹಕರೊಬ್ಬರಿಗೆ ಸೇರಿದ್ದ ಚಿನ್ನ ಇದಾಗಿತ್ತು. ಅದೇ ವೇಳೆ ಆ ರಸ್ತೆಯಿಂದ ಬಂದ ಪುಟ್ಟ ಮಗು ಹಾಗೂ ಮಗುವಿನ ತಂದೆ ಜೊತೆ ಸೇರಿ ಬಿದ್ದುಸಿಕ್ಕಿದ ಚಿನ್ನವನ್ನು ಬಾವಾ ಜ್ಯುವೆಲ್ಲರಿ ಯವರ ಸಹಾಯದ ಮುಖಾಂತರ ವಾರಿಸುದಾರರಿಗೆ ತಲುಪಿಸಿದ್ದಾರೆ.

ಅಂಗಡಿಯ ಮುಂಭಾಗ ಬಿದ್ದು ಸಿಕ್ಕಿದ ಚಿನ್ನವನ್ನು ತಂದು ತಲುಪಿಸಿ ಮಾನವೀಯತೆ ಮೆರೆದ ಪುಟಾಣಿಗೆ ಬಾವಾ ಜ್ಯುವೆಲ್ಲರ್ಸ್ ಮಾಲಕರಾದ ಸಾದಿಕ್ ಹಾಗೂ ಸಿಬ್ಬಂದಿ ಇರ್ಷಾದ್ ಮುಕ್ವೆರವರು ಉಡುಗೊರೆಯನ್ನು ನೀಡುವುದರ ಮೂಲಕ ಅಭಿನಂದಿಸಿದರು.