dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಹುದ್ದೆಯನ್ನು ಅಲಂಕರಿಸದೆ, ಪ್ರತಿಫಲಾಪೇಕ್ಷೆ ಬಯಸದೆ ಪಕ್ಷ ನಿಷ್ಠೆಯಿಂದ ಕಾಂಗ್ರೆಸ್ ಪರ ಸದಾ ಧ್ವನಿ ಎತ್ತುವ ಹಲವು ಕಾರ್ಯಕರ್ತರಿಗೆ ಬೆದರಿಕೆ, ವಿದೇಶಿ ನಕಲಿ ನಂಬರ್ ಗಳಿಂದ ಧಮ್ಕಿ ಕರೆಗಳು, ಧ್ವನಿ ಸಂದೇಶಗಳು, ನಕಲಿ ನಂಬರ್ ಗಳಿಂದ ರಚಿಸಲ್ಪಟ್ಟ ವಾಟ್ಸಾಪ್ ಗ್ರೂಪ್ ಗಳಿಗೆ ಸೇರಿಸಿ ವೈಯುಕ್ತಿಕ ತೇಜೋವಧೆ ಮಾಡಿ ಕಾರ್ಯಕರ್ತರ ಧ್ವನಿ ಅಡಗಿಸುವ ನೀಚ ಮಟ್ಟದ ರಾಜಕೀಯಕ್ಕೆ ಎಸ್ಡಿಪಿಐ ಕಾರ್ಯಕರ್ತರು ಎನ್ನಲಾದ ಹಲವರು ಕೈಹಾಕಿದ ಬಗ್ಗೆ ಕಾರ್ಯಕರ್ತ ವಲಯದಿಂದ ದೂರುಗಳು ಕೇಳಿಬಂದಿದ್ದು, ಈ ಬಗ್ಗೆ ಪೂರಕವಾದ ಹಲವು ದಾಖಲೆಗಳು ಕೂಡ ಲಭ್ಯವಾಗಿದ್ದು, ಈ ಬಗ್ಗೆ ಶೀಘ್ರದಲ್ಲೇ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಕಾನೂನು ಸಲಹೆಗಾರರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದ್ದೇವೆ.



ಕೆಲವು ದಿನಗಳ ಹಿಂದೆ ಎಸ್ಡಿಪಿಐ ನಾಯಕನ ಡಬಲ್ ಎಮ್( ಮಸಲ್ ಪವರ್- ಸ್ನಾಯು ಶಕ್ತಿ, ಮ್ಯಾನ್ ಪವರ್-ಮಾನವ ಶಕ್ತಿ), ನಾವು ಕಬರಿಗೆ (ಮರಣ ಭೂಮಿಗೆ) ಕಳುಹಿಸಲೂ ಸಿದ್ದ, ಆಸ್ಪತ್ರೆಗೆ ಕಳುಹಿಸಲೂ ಸಿದ್ದ ಎಂಬ ದ್ವೇಷ ಭಾಷಣದ ನಂತರ ನಮ್ಮ ಕಾಂಗ್ರೆಸ್ ಕಾರ್ಯಕರ್ತರಿಗೆ ಹಲವು ಕಡೆಗಳಿಂದ ಎಸ್ಡಿಪಿಐ ಕಾರ್ಯಕರ್ತರು ಎನ್ನಲಾದ ಹಲವರಿಂದ ಇಂತಹ ಬೆದರಿಕೆ, ಧಮ್ಕಿ ಕರೆಗಳು, ಧ್ವನಿ ಸಂದೇಶಗಳು ಹೆಚ್ಚಾಗಿದ್ದು, ಮುಂದೆ ಬರುವ ಅನಾಹುತಗಳಿಗೆ ಈ‌ ರೀತಿ ದ್ವೇಷ ಬಿತ್ತುವ ಭಾಷಣ ಬಿಗಿದಂತಹ ಎಸ್ಡಿಪಿಐ ನಾಯಕರೇ ‌ನೇರ ಹೊಣೆಗಾರರು ಎಂದು ಆರೋಪಿಸಿದರು.
ಎಸ್ಡಿಪಿಐ ಪಕ್ಷವನ್ನು ವಿಮರ್ಶಿಸಿದ ‌ಕಾರಣಕ್ಕಾಗಿ ಕೆಲವು ಧಾರ್ಮಿಕ ಪಂಡಿತರಿಗೂ ವಿದೇಶಿ ನಂಬರ್ ಗಳಿಂದ ಬೆದರಿಕೆ ಕರೆಗಳು ಬಂದಿರುವ ಬಗ್ಗೆ ಮಾಹಿತಿ ಬಂದಿದ್ದು, ಸೂಕ್ತ ಸಮಯದಲ್ಲಿ ದಾಖಲೆ ಸಮೇತ ಬಹಿರಂಗಪಡಿಸಲಿದ್ದೇವೆ ಎಂದು ಎಚ್ಚರಿಸಿದರು.

ನಮ್ಮ ಕಾರ್ಯಕರ್ತರ ರಕ್ಷಣೆಗೆ ನಾವು ಯಾವತ್ತಿಗೂ ಕಟಿಬದ್ದ, ಇಂತಹ ಗೊಡ್ಡು ಬೆದರಿಕೆಗಳ ಮೂಲಕ ಕಾರ್ಯಕರ್ತರ ಧ್ವನಿ ಅಡಗಿಸಬಹುದು ಎಂಬ ಭ್ರಮೆ ಕೆಲವರಲ್ಲಿ ಇದ್ದರೆ ನಿಮ್ಮ ಊಹೆ ತಪ್ಪಾಗಿದೆ, ಇದು ಕೇವಲ ನಿಮ್ಮ ಭ್ರಮೆ ಮಾತ್ರ. ಹೋರಾಟದ ಹಿನ್ನೆಲೆಯಿಂದ ಹುಟ್ಟಿ ಬಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇಂತಹ ಗೊಡ್ಡು ಬೆದರಿಕೆಗಳಿಗೆ ಜಗ್ಗುವವರೋ, ಕುಗ್ಗುವವರೋ ಅಲ್ಲ. ಕಾಂಗ್ರೆಸ್ ಪಕ್ಷಕ್ಕೆ ಸಾಮಾಜಿಕ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯ ಪರಂಪರೆಯ ಒಂದು ಹಿನ್ನೆಲೆ ಇದೆ. ಕಾಂಗ್ರೆಸ್ ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸಿ, ಪರಸ್ಪರ ಕಚ್ಚಾಡಿಸಿ ಹಿಂಸಾತ್ಮಕ ರಾಜಕೀಯದ ಮೂಲಕ ಮುನ್ನೆಲೆಗೆ ಬಂದ ಪಕ್ಷವಲ್ಲ, ಅದು ಕಾಂಗ್ರೆಸ್ ಪಕ್ಷದ ಸಂಸ್ಕೃತಿಯೂ ಅಲ್ಲ, ನಾವು ದೇಶದ ಕಾನೂನನ್ನು ಯಾವತ್ತಿಗೂ ಕೈಗೆತ್ತಿಕೊಂಡವರೂ ಅಲ್ಲ. ಆದರೆ ಇದನ್ನೇ ದಾಳವಾಗಿಸಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಕೋಮುವಾದಿ ಶಕ್ತಿಗಳು ಈ ರೀತಿ ಬೆದರಿಕೆ, ಧಮ್ಕಿ ಹಾಕುವ ಮೂಲಕ ದಾಳಿ ನಡೆಸುವುದು ಇವರ ರಾಜಕೀಯ ದಿವಾಳಿತನವನ್ನು ತೋರಿಸುತ್ತದೆ ಎಂದು ಪುತ್ತೂರು ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮೋನು ಬಪ್ಪಳಿಗೆ ಅವರು ಹೇಳಿದರು.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!