ಪುತ್ತೂರು: ಶಾಸಕರಾದ ಶ್ರೀಯುತ ಸಂಜೀವ ಮಠಂದೂರು ಒಡ್ಯ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ,ಶಾಲೆಯಲ್ಲಿ ನಡೆಯುವ ಶಾಲಾಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿದರು.
ಮತ್ತು ಗಡಿನಾಡ ಗ್ರಾಮೀಣಶಾಲೆಯ ಕುರಿತು ಸಂಪೂರ್ಣ ವಿವರ ಪಡೆದುಕೊಂಡು, ಮಕ್ಕಳ ಹಾಜರಾತಿ ಹೆಚ್ಚಿಸಲು ಹೆಚ್ಚಿನ ಶ್ರಮ ವಹಿಸುವಂತೆ ಶಿಕ್ಷಕರಿಗೂ ಮತ್ತು ಶಾಲಾಭಿವೃದ್ಧಿ ಸಮಿತಿಯವರಿಗೂ ಸಲಹೆ ನೀಡಿದರು.
ಶಾಸಕನಾಗಿ ಗಡಿನಾಡ ಗ್ರಾಮೀಣಶಾಲೆಯ ಶೈಕ್ಷಣಿಕ ಗುಣಮಟ್ಟದ ಅಭಿವೃದ್ಧಿಗಾಗಿ,ಒಂದು ಸ್ಮಾರ್ಟ್ ಕ್ಲಾಸ್ ನ ರಚನೆಗೆ ಸರಕಾರದಿಂದ 3.50ಲಕ್ಷ ರೂಗಳನ್ನು ಮುಂದಿನ ದಿನಗಳಲ್ಲಿ ಒದಗಿಸುವ ಬಗ್ಗೆ ಭರವಸೆ ನೀಡಿದರ.
ಮತ್ತು ಬಡ ಗ್ರಾಮೀಣಮಕ್ಕಳನ್ನೂ ಪ್ರೀತಿಯಿಂದ ಮಾತನಾಡಿಸಿ ಒಮಿಕ್ರಾನ್,ಕೊರೋನಾ ದಂತಹಾ ಸಂದಿಗ್ಧ ಪರಿಸ್ಥಿತಿ ಯಲ್ಲೂ ಯಾವುದೇ ಧೈರ್ಯಗೆಡದೇ ಜಾಗರೂಕತೆಯಿಂದ ನೀವಿರಬೇಕು.
ಮತ್ತು ನಿಮ್ಮ ಉತ್ತಮ ಭವಿಷ್ಯಕ್ಕಾಗಿ ನೀವೆಲ್ಲರೂ ಚೆನ್ನಾಗಿ ಕಲಿತು ಈ ಶಾಲೆಗೂ ಕೀರ್ತಿ ತಂದು ಉತ್ತಮ ಪ್ರಜೆಗಳಾಗಬೇಕು,ನಿಮ್ಮನ್ನು ನೋಡಲು ತಾನು ಖಂಡಿತಾ ಆಗಾಗ ಶಾಲೆಗೆ ಭೇಟಿ ನೀಡಿ,ಈ ಶಾಲೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದಾಗಿಯೂ ಹೇಳಿದರು.
ಮತ್ತು ಬಿಡುವಿಲ್ಲದ ತಮ್ಮ ಕಾರ್ಯಕ್ರಮ ಗಳೆಡೆಯಲ್ಲೂ ಮಕ್ಕಳಿಗಾಗಿ ಒಂದೈದುನಿಮಿಷ ಮೀಸಲಿಟ್ಟು ಮಕ್ಕಳ ಮನಗೆದ್ದ ಶಾಸಕರ ಉತ್ತಮ ನಡೆಯನ್ನು ಎಲ್ಲರೂ ಶ್ಲಾಘಿಸಿದರು, ಇದಕ್ಕೂ ಮೊದಲು ಶಾಸಕರನ್ನು ,ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀಯುತ ಶ್ರೀಕೃಷ್ಣ ಭಟ್ ಬಟ್ಯಮೂಲೆ,ಮತ್ತು ಶಾಲಾ ಮುಖ್ಯ ಗುರು ಉಸ್ಮಾನ್,ದಿವ್ಯಾ,ಊರವರಾದ ಶಂಕರ ರೈ ಬಾಳೆಮೂಲೆ,ಯಶೋದಾ ಮಾಯಿಲಕಾನ, ಪೋಷಕರಾದ ಸುಮಿತ್ರಾ, ಈಶ್ವರನಾಯ್ಕ,ಮತ್ತಿತರರು ಹಾರ್ದಿಕವಾಗಿ ಬರಮಾಡಿಕೊಂಡರು.