ಮಡಂತ್ಯಾರು: ಮನ್ ಶರ್ ಪ್ಯಾರಾಮೆಡಿಕಲ್ ಕಾಲೇಜು ಬೆಳ್ತಂಗಡಿ ಮತ್ತು ಕಾಮತ್ ಆಪ್ಟಿಕಲ್ಸ್ ಸಹಯೋಗದೊಂದಿಗೆ ಎಸ್ ಡಿ ಪಿ ಐ ಪಾರೆಂಕಿ ಹಾಗೂ ಮಚ್ಚಿನ ಗ್ರಾಮ ಸಮಿತಿ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಬಂಗೇರಕಟ್ಟೆಯಲ್ಲಿ ಏರ್ಪಡಿಸಲಾಗಿತ್ತು.
ಬದ್ರಿಯಾ ಜುಮಾ ಮಸ್ಜಿದ್ ಬಂಗೇರಕಟ್ಟೆ ಇದರ ಖತಿಬರಾದ ಜಾಬಿರ್ ಫೈಝೀ ಬನಾರಿ ದುಆ ನೇರವೇರಿಸಿದರು. ಮನ್ ಶರ್ ಪ್ಯಾರಾಮೆಡಿಕಲ್ ಕಾಲೇಜು ಪ್ರಿನ್ಸಿಪಾಲ್ ಹೈದರ್ ಮಾತನಾಡಿ ಆರೋಗ್ಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಎಸ್ ಡಿ ಪಿ ಐ ಬೆಳ್ತಂಗಡಿ ವಿಧಾನಸಭಾ ಅಧ್ಯಕ್ಷರಾದ ನಿಸಾರ್ ಕುದ್ರಡ್ಕ, ಪಿ ಎಫ್ ಐ ಮಡಂತ್ಯಾರು ಡಿವಿಷನ್ ಅಧ್ಯಕ್ಷರಾದ ಬಿ. ಎಮ್ ರಝಾಕ್, ಜಮಾಹತ್ ಗೌರವಾಧ್ಯಕ್ಷ ಹೈದರ್ ಎಮ್.ಆರ್, ಅಧ್ಯಕ್ಷ ಸಿರಾಜುದ್ದಿನ್ ಬಂಗೇರಕಟ್ಟೆ, ಇಕ್ಬಲ್ ಬಂಗೇರಕಟ್ಟೆ, ಎಸ್ ಡಿ ಪಿ ಐ ಗ್ರಾಮ ಸಮಿತಿ ಅಧ್ಯಕ್ಷ ಮುನಾಫ್ ಕಲ್ಲಗುಡ್ಡೆ, ಅಬ್ದುಲ್ ರಹಿಮಾನ್ ಸ್ಟೋರ್ ಉಪಸ್ಥಿತರಿದ್ದರು. ಬೆಳ್ತಂಗಡಿ ಎಸ್ ಡಿ ಪಿ ಐ ಸಂಘಟನಾ ಕಾರ್ಯದರ್ಶಿ ಹನೀಫ್ ಟಿ. ಎಸ್ ಕಾರ್ಯಕ್ರಮ ನಿರೂಪಿಸಿದರು.
ಸುಮಾರು 150 ಕ್ಕೂ ಅಧಿಕ ಅರೋಗ್ಯ ತಪಾಸಣೆ ಹಾಗೂ 50 ಕ್ಕೂ ಹೆಚ್ಚು ನೇತ್ರ ತಪಾಸಣೆ ನಡೆಸಲಾಯಿತು. ಗ್ರಾಮದ ಹಿರಿಯರು, ಮಹಿಳೆಯರು, ಮಕ್ಕಳು ಈ ಶಿಬಿರದ ಸದುಪಯೋಗ ಪಡೆದುಕೊಂಡರು.