ಮಂಗಳೂರು: ಇತ್ತೀಚೆಗೆ ರಾಜ್ಯಾದ್ಯಂತ ಕರ್ನಾಟಕ ಉಚ್ಛ ನ್ಯಾಯಾಲಯದ ಮಧ್ಯಂತರ ಆದೇಶ ಇದ್ದು, ಆದೇಶವನ್ನು ತಪ್ಪಾಗಿ ಗ್ರಹಿಸಿ ಹಲವು ವಿದ್ಯಾರ್ಥಿಗಳನ್ನು ಶೈಕ್ಷಣಿಕ ಸಂಸ್ಥೆಗಳಿಗೆ ಪ್ರಾಧ್ಯಾಪಕ ರಿಂದ ಮತ್ತು ಪ್ರಾಂಶುಪಾಲರಿಂದ ಪ್ರವೇಶ ನಿರಾಕರಿಸಲಾಗಿದೆ. ಇದು ನ್ಯಾಲಾಯದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ವಿದ್ಯಾರ್ಥಿಗಳ ಪ್ರವೇಶವನ್ನು ಸುಗಮ ಗೊಳಿಸಬೇಕು ಮತ್ತು ಸಮರ್ಪಕ ಗೊಳಿಸ ಬೇಕೆಂದು ಆಗ್ರಹಿಸಿ ಕೆ.ಅಶ್ರಫ್ ನೇತೃತ್ವದ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ನಿಯೋಗ ದ.ಕ.ಜಿಲ್ಲಾಧಿಕಾರಿ ಯವ ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ನಿಯೋಗ ದಲ್ಲಿ ಅಬೂಬಕ್ಕರ್ ಕುಳಾಯಿ, ಅಬ್ದುಲ್ ಜಲೀಲ್ ಅದ್ದು ಕೃಷ್ಣಾಪುರ, ಮುಸ್ತಫಾ ಸಿ.ಎಂ, ಮೊಯಿದಿನ್ ಮೋನು, ವಿ.ಎಚ್. ಕರೀಮ್, ಬಶೀರ್ ಹೊಕ್ಕಾ ಡಿ ಮತ್ತು ನೌಶಾದ್ ಬಂದರ್, ಅನ್ವರ್ ಸಾದತ್ ಬಜೆತ್ತೂರ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಯವರು ನ್ಯಾಯಾಲಯದ ಸಲಹೆಗಳನ್ನು ಅನುಸರಿಸಿ ಪ್ರಸ್ತುತ ಸೃಷ್ಟಿಯಾದ ಸಮಸ್ಯೆ ಇತ್ಯರ್ಥಕ್ಕೆ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ .