ಉಪ್ಪಿನಂಗಡಿ: ದ್ವಿಚಕ್ರ ವಾಹನ’ಕ್ಕೆ KSRTC ಬಸ್ಸ್ ಡಿಕ್ಕಿ ಹೊಡೆದು ಇಬ್ಬರು ಸಹೋದರರು ಮೃತಪಟ್ಟ ದಾರುಣ ಘಟನೆ ಗುರುವಾಯನಕೆರೆ – ಮೂಡಬಿದಿರೆ ಹೆದ್ದಾರಿಯ ಗರ್ಡಾಡಿ ಎಂಬಲ್ಲಿ ಇಂದು ಸಂಜೆ ನಡೆದಿದೆ.
ಉಪ್ಪಿನಂಗಡಿಯ ಹೀರೆಬಂಡಾಡಿ ಸಮೀಪದ ಆನಾಡ್ಕ ನಿವಾಸಿ ಸಾದಿಕ್(35) ಹಾಗೂ ಆತನ ಸಹೋದರ ಸಿರಾಜುದ್ದೀನ್(30) ಮೃತ ದುರ್ದೈವಿಗಳು.
ಉಪ್ಪಿನಂಗಡಿ ಕಡೆ ಬರುತ್ತಿದ್ದ ಅಕ್ಟೀವಾ ಮತ್ತು KSRTC ಬಸ್ಸ್ ನಡುವೆ ಗುರುವಾಯನಕೆರೆ ಸಮೀಪದ ಗರ್ದಾಡಿ ಎಂಬಲ್ಲಿ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ಒಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮೃತ ಯುವಕರನ್ನು ಉಪ್ಪಿನಂಗಡಿಯ ಹೀರೆಬಂಡಾಡಿ ನಿವಾಸಿ ರಝಾಕ್ ಮಾಸ್ಟರ್ ಎಂಬವರ ಮಕ್ಕಳು ಎಂದು ತಿಳಿದು ಬಂದಿದೆ.
ಮೃತ ಶರೀರವು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿಸಲಾಗಿದೆ.
ಅಪಘಾತಕ್ಕೆ ಬಸ್ಸ್ ಚಾಲಕನ ಅಜಾಗರೂಕತೆಯೇ ಕಾರಣ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.