ಸುಳ್ಯ: ಬೈಕ್ ಹಾಗೂ ಜೀಪು ಮಧ್ಯೆ ಅಪಘಾತ ನಡೆದು ಬೈಕ್ ನಲ್ಲಿದ್ದ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಹಾಗೂ ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ಪೆರಾಜೆಯ ಕುಂಬಳಚೇರಿ ಎಂಬಲ್ಲಿ ನಡೆದಿದೆ.
ಪೆರಾಜೆಯ ಆರ್.ಡಿ. ವೆಂಕಪ್ಪ ರವರ ಪುತ್ರ ದರ್ಶನ್ ಮತ್ತು ಪೆರಾಜೆಯ ಲೋಕನಾಥ ಕುಂದಲ್ಪಾಡಿ ಅವರ ಪುತ್ರ ವಿಶ್ವದೀಪ್ ಸುಳ್ಯದ ಸೈಂಟ್ ಜೋಸೆಫ್ ಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿಗಳಾಗಿದ್ದು ಇಂದು ಪರೀಕ್ಷೆ ಮುಗಿಸಿ ಇಬ್ಬರು ಬೈಕಿನಲ್ಲಿ ಮನೆಗೆ ತೆರಳುತ್ತಿದ್ದರು.
ಈ ವೇಳೆ ಕುಂಬಳಚೇರಿ ಬಳಿಯ ಗಡಿ ಗುಡ್ಡೆ ಎಂಬಲ್ಲಿ ಎದುರಿನಿಂದ ಬರುತ್ತಿದ್ದ ಜೀಪ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬ್ರೇಕ್ ಹಾಕಿದಾಗ ಬೈಕ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಜೀಪಿಗೆ ಗುದ್ದಿತೆನ್ನಲಾಗಿದೆ.
ದುರ್ಘಟನೆಯಲ್ಲಿ ಇಬ್ಬರು ರಸ್ತೆಗೆಸಯಲ್ಪಟ್ಟಿದ್ದು, ಡಾಮರ್ ಗೆ ತಲೆ ಒಡೆಯಲ್ಪಟ್ಟು ವಿಶ್ವದೀಪ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನೊರ್ವ ದರ್ಶನ್ ಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ದರ್ಶನ್ ನನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.