ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಪ್ರ,ಪ್ರಥಮ ಅನಾಥ ನಿರ್ಗತಿಕರ ವಿದ್ಯಾ ಸಮುಚ್ಚಯ ಅಲ್-ಮದೀನತ್ತುಲ್ ಮುನವ್ವರ ಎಜ್ಯುಕೇಶನಲ್ ಸೆಂಟರ್ ಮೂಡಡ್ಕ ಇದರ ಅಧೀನದ ಮದೀನತುಲ್ ಉಲೂಂ ಕಾಲೇಜ್ ಆಫ್ ಶರೀಅಃ ಇದರ 20ನೇ ದರ್ಸ್ ವಾರ್ಷಿಕ ಕಾರ್ಯಕ್ರಮ ಮತ್ತು ಸನದುದಾನ ಮಹಾ ಸಮ್ಮೇಳನ ನಾಳೆ ಮಾರ್ಚ್ 24 ಗುರುವಾರ ಅಲ್-ಮುನವ್ವರ ಕ್ಯಾಂಪಸ್ ಮೂಡಡ್ಕದಲ್ಲಿ ನಡೆಯಲಿದ್ದು ಪ್ರಭಾಷಣ ಲೋಕದ ದಿಗ್ಗಜ ಮೌಲಾನಾ ಪೆರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಿದ್ದು ಕಾರ್ಯಕ್ರಮವನ್ನು ಐತಿಹಾಸಿಕ ಗೊಳಿಸಲು S,S,F ಸರಳಿಕಟ್ಟೆ ಸೆಕ್ಟರ್ ಸಮಿತಿ ಮತ್ತು S,S,F ಉಪ್ಪಿನಂಗಡಿ ಡಿವಿಷನ್ ಸಮಿತಿ ಕರೆ ಕೊಟ್ಟಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ S,S,F ಉಪ್ಪಿನಂಗಡಿ ಡಿವಿಷನ್ ಅಧ್ಯಕ್ಷ ಇಸ್ಹಾಕ್ ಮದನಿ ಅಳಕ್ಕೆ ಮೂಡಡ್ಕ ವಿದ್ಯಾ ಸಮುಚ್ಚಯ ಹಲವಾರು ವಿದ್ಯಾರ್ಥಿಗಳ ಪಾಲಿಗೆ ಭರವಸೆಯ ಕೇಂದ್ರವಾಗಿದೆ, ವಿದ್ಯೆಯ ಹಾದಿಯಲ್ಲಿ ಬಲು ದೊಡ್ಡ ಸೇವೆ ಈ ಸಂಸ್ಥೆಗೈದಿದೆ ಇದೀಗ ಸ್ವಲಾಹುದ್ದೀನ್ ಸಖಾಫಿ ಉಸ್ತಾದರ ದರ್ಸ್ 20ನೇ ವರ್ಷದ ಹೊಸ್ತಿಲಲ್ಲಿ ಇರುವುದು ಸಂತೋಷದ ವಿಚಾರ ನಾಳೆ ಸಂಜೆ 7ಕ್ಕೆ ನಡೆಯುವ ಮಹಾ ಸಮ್ಮೇಳನದಲ್ಲಿ ಎಲ್ಲಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅವರು ಹೇಳಿದರು.
ಇದೇ ವೇಳೆ S,S,F ಸರಳಿಕಟ್ಟೆ ಸೆಕ್ಟರ್ ಅಧ್ಯಕ್ಷ ನಾಸಿರ್ ಮುಈನಿ ಸರಳಿಕಟ್ಟೆ ಮಾತನಾಡಿ ತೆಕ್ಕಾರು ಗ್ರಾಮದ ಒಂದು ಕುಗ್ರಾಮದಲ್ಲಿ ಪ್ರಾರಂಭವಾದ ಈ ಸಂಸ್ಥೆ ಇದೀಗ ಜಗದಗಳ ಹರಡಿ ನಿಂತಿದೆ.
ಇದೀಗ ಅಲ್ಲಿನ ದರ್ಸ್ 20ನೇ ವರ್ಷಾಚರಣೆಯ ಸಂಭ್ರಮದಲ್ಲಿರುವುದು ಸಂತೋಷದ ವಿಚಾರ ಸರಳಿಕಟ್ಟೆ ಸೆಕ್ಟರ್ ವ್ಯಾಪ್ತಿಯ ಎಲ್ಲಾ ಕಾರ್ಯಕರ್ತರು,ಸಾರ್ವಜನಿಕರು ನಾಳೆ ಗುರುವಾರ ಮೂಡಡ್ಕದಲ್ಲಿ ನಡೆಯುವ ಐತಿಹಾಸಿಕ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಅವರು ಕರೆಕೊಟ್ಟರು.
ಕಾರ್ಯಕ್ರಮದಲ್ಲಿ ಸೆಯ್ಯದ್ ಕೂರತ್ ತಂಙಳ್, ಸೆಯ್ಯದ್ ಇಸ್ಮಾಯಿಲ್ ಅಲ್ ಹಾದಿ ತಂಙಳ್, ಸ್ವಲಾಹುದ್ದೀನ್ ಸಖಾಫಿ, ಅಶ್ರಫ್ ಸಖಾಫಿ ಇನ್ನಿತರ ಹಲವಾರು ಉಲಮಾ, ಉಮರಾ ನಾಯಕರು ಬಾಗವಹಿಸಲಿದ್ದಾರೆ.