ಕಣ್ಣೂರು: ಬಸ್ಸಿನಲ್ಲಿ ಅಸಭ್ಯವಾಗಿ ವರ್ತಿಸಿದ ಕಾಮುಕನನ್ನು ಯುವತಿಯೊಬ್ಬಳು ಅಟ್ಟಿಸಿಕೊಂಡು ಹೋಗಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಕೇರಳದ ಕಣ್ಣೂರು ಕರಿವೆಲ್ಲೂರಿನಲ್ಲಿ ನಡೆದಿದೆ.

ರಾಜೀವ್ (52) ಬಂಧಿತ ಆರೋಪಿ. ಕಣ್ಣೂರಿನಿಂದ KSRTC ಬಸ್‌ನಲ್ಲಿ ಆರ್‌ಟಿ ಭಾರತಿ ಪ್ರಯಾಣ ಮಾಡುತ್ತಿದ್ದಳು. ಸರ್ಕಾರದ ನೀತಿಯನ್ನು ವಿರೋಧಿಸಿ ಕೇರಳದ ಖಾಸಗಿ ಬಸ್ ಸ್ಟ್ರೈಕ್ ಇದ್ದ ಕಾರಣ ಸರ್ಕಾರಿ ಬಸ್‌ಗಳೆಲ್ಲ ತುಂಬಿ ತುಳುಕುತ್ತಿತ್ತು. ಈ ವೇಳೆ ವ್ಯಕ್ತಿಯೊಬ್ಬ ಆರತಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ.
ಆತನಿಗೆ ಅನೇಕ ಬಾರಿ ಎಚ್ಚರಿಕೆ ನೀಡಿದರೂ ಕೂಡ ಅದನ್ನು ಲೆಕ್ಕಿಸದೆ ತನ್ನ ನೀಚ ಕೆಲಸ ಮುಂದುವರೆಸಿದ್ದಾನೆ. ಆಕೆಗೆ ಕಿರುಕುಳ ನೀಡುವುದು ತಿಳಿಯುತ್ತಿದ್ದರೂ ಬಸ್ಸಿನಲ್ಲಿದ್ದ ಯಾರೂ ಆಕೆಯ ಸಹಾಯಕ್ಕೆ ಬಂದಿರಲಿಲ್ಲ. ಆ ಸಂದರ್ಭ ಆರತಿ ಪೊಲೀಸ್‌ನವರಿಗೆ ಫೋನ್ ಮಾಡಿ ಮಾಹಿತಿ ನೀಡುತ್ತಾಳೆ.
ಇದು ಗೊತ್ತಾಗುತ್ತಿದ್ದಂತೆ ಆರೋಪಿ ಬಸ್ಸಿನಿಂದ ಇಳಿದು ಪರಾರಿಯಾಗಲು ಯತ್ನಿಸುತ್ತಾನೆ. ಆದರೆ ಮುಂದಾಲೋಚನೆಯಿಂದ ಆರತಿ ಆತನ ಫೋಟೋ ಕ್ಲಿಕ್ಕಿಸಿಕೊಂಡಿದ್ದು , ಆರೋಪಿ ರಾಜೀವ್ ಲಾಟರಿ ಕೊಳ್ಳುವ ಗ್ರಾಹಕನಂತೆ ನಾಟಕವಾಡಿ ಅಂಗಡಿ ಒಳಕ್ಕೆ ಹೋದಾಗ ಸ್ಥಳೀಯರ ನೆರವಿನಿಂದ ಆತನನ್ನು ಆಕೆ ಪೊಲೀಸರಿಗೆ ಒಪ್ಪಿಸುತ್ತಾಳೆ.
ಪದವಿ ಪೂರ್ಣಗೊಳಿಸಿರುವ ಆರತಿ ತನ್ನ ಕಾಲೇಜು ದಿನಗಳಲ್ಲಿ ಎನ್‌ಸಿಸಿ ಸೀನಿಯರ್ ಅಂಡರ್ ಆಫೀಸರ್ ಆಗಿದ್ದರು. ಇವರ ಈ ಕಾರ್ಯ ಅನೇಕ ಮಹಿಳೆಯರಿಗೆ, ಹುಡುಗಿಯರಿಗೆ ನಿದರ್ಶನ.