ಉಪ್ಪಿನಂಗಡಿ: ರಾಜ್ಯದಲ್ಲಿ ತಾಂಡವಾಡುತ್ತಿರುವ ಹಿಜಾಬ್, ಹಲಾಲ್ ಎಂಬ ವಿಚಾರಗಳ ಸಂಬಂಧಿಸಿ ಸಂವಿಧಾನ ವಿರೋಧಿ ನಡುವಳಿಕೆಗಳ ವಿರುದ್ಧ SSF ಉಪ್ಪಿನಂಗಡಿ ಡಿವಿಷನ್ ಕಾನ್ಫರೆನ್ಸ್ ನಾಳೆ ಉಪ್ಪಿನಂಗಡಿ ಹೆಚ್,ಎಂ ಅಡಿಟೋರಿಯಂ ಮುಂಬಾಗ ನಡೆಯಲಿದೆ.
ಮರ್ಕಝ್ ಚಾನ್ಸಿಲರ್ ಡಾ/ಹುಸೈನ್ ಸಖಾಫಿ ಚುಳ್ಳಿಕೋಡ್ ಪ್ರೌಢ ಗಾಂಭೀರ್ಯ ಪ್ರಬಾಷಣ ನಡೆಸಲಿದ್ದು.
ಸಂವಿಧಾನ,ಧರ್ಮ,ರಾಜಕೀಯ ಎಂಬ ವಿಚಾರಗಳ ಕುರಿತು ವಿಷಯ ಮಂಡಿಸಲಿದ್ದಾರೆ.
ನಾಳೆ ಸಂಜೆ 7ಕ್ಕೆ ಕಾರ್ಯಕ್ರಮ ನಡೆಯಲಿದ್ದು ಸಾವಿರಾರು ಮಂದಿ ಬಾಗವಹಿಸುವ ನಿರೀಕ್ಷೆಯಿದೆ ಎಂದು SSF ಉಪ್ಪಿನಂಗಡಿ ಡಿವಿಷನ್ ಅಧ್ಯಕ್ಷ ಇಸ್ಹಾಕ್ ಮದನಿ ಅಳಕ್ಕೆ ಮಾಧ್ಯಮಕ್ಕೆ ತಿಳಿಸಿದರು.
ಇದೇ ವೇಳೆ SSF ಸರಳಿಕಟ್ಟೆ ಸೆಕ್ಟರ್ ಅಧ್ಯಕ್ಷ ನಾಸಿರ್ ಮುಈನಿ ಈ ಕಾರ್ಯಕ್ರಮದ ಯಶಸ್ವಿಗೆ ಕರೆಕೊಟ್ಟಿದ್ದಾರೆ.
ಮುಸ್ಲಿಂ ಸಮುದಾಯವನ್ನು ಒಂದು ಕೀಳು ಮಟ್ಟದಲ್ಲಿ ಕಾಣುತ್ತಿರುವುದು ವಿಷಾದನೀಯ ರಾಷ್ಟದ ಸಂವಿಧಾನ ಬದ್ಧವಾಗಿ ಜೀವಿಸಲು ನಮಗೂ ಹಕ್ಕಿದೆ ಇದೀಗ ಎದ್ದಿರುವ ಹಲವಾರು ವಿವಾದಗಳು ನಮ್ಮನ್ನು ಬಲಿಪಶು ಮಾಡುವಂತಿದೆ ಈ ಎಲ್ಲಾ ವಿಚಾರಗಳ ಮುಂದಿಟ್ಟು SSF ಉಪ್ಪಿನಂಗಡಿ ಡಿವಿಷನ್ ಕಾನ್ಫರೆನ್ಸ್ ನಾಳೆ H,M ಹಾಲ್ ಮುಂಬಾಗ ನಡೆಯಲಿದೆ ಪ್ರಸ್ತುತ ಕಾರ್ಯಕ್ರಮ ಯಶಸ್ವಿಗೊಳಿಸಲು ಸರಳಿಕಟ್ಟೆ ಸೆಕ್ಟರ್ ವ್ಯಾಪ್ತಿಯ ಎಲ್ಲಾ ಸುನ್ನೀ ಕಾರ್ಯಕರ್ತರು, ಸಾರ್ವಜನಿಕರು ಸಹಕರಿಸಬೇಕೆಂದು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅವರು ಹೇಳಿದರು.