ಗುಂಡ್ಲುಪೇಟೆ(ಚಾಮರಾಜನಗರ): ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ ಮಾಡಲು ಯತ್ನಿಸಿರುವ ಘಟನೆ ನಡೆದಿದ್ದು, ಕೂದಲೆಳೆಯಿಂದ ಪಾರಾಗಿ ಪ್ರಾಣ ಉಳಿದಿದೆ.

ಮದ್ದೂರು ವಲಯದ ಬ್ರಿಡ್ಜ್ ಹತ್ತಿರ ಎಡಭಾಗದಲ್ಲಿ ಕಾರು ನಿಲ್ಲಿಸಿ ಮೂತ್ರ ವಿಸರ್ಜಿಸಲು ಬಲ ಭಾಗಕ್ಕೆ ಹೋಗಿದ್ದಾಗ ಆನೆ ಬರುವುದನ್ನು ಕಂಡು ಜತೆಯಲ್ಲಿ ಇದ್ದವರು ಕಾರು ಹತ್ತಿದ್ದಾರೆ. ಬಳಿಕ ಕೆರಳಿದ ಆನೆ ಬಲ ಭಾಗದಲ್ಲಿ ಇದ್ದ ವ್ಯಕ್ತಿಯ ಮೇಲೆ ದಾಳಿ ಮಾಡಲು ಯತ್ನಿಸಿ ಅಟ್ಟಿಸಿಕೊಂಡು ಹೋದಾಗ ವ್ಯಕ್ತಿ ಎಡ ಬದಿಯಲ್ಲಿದ್ದ ಕಾರಿನತ್ತ ಓಡಿ ಹೋಗಿದ್ದಾನೆ. ಕಾರಿನ ಬಾಗಿಲ ಬಳಿ ಹೋಗುತ್ತಿದ್ದಂತೆ ಬಿದ್ದಿದ್ದಾನೆ. ಕೂಡಲೇ ಕಾರಿನಲ್ಲಿದ್ದವರು ಒಳಗೆ ಎಳೆದುಕೊಂಡಿದ್ದಾರೆ. ಕ್ಷಣಾರ್ಧದಲ್ಲಿ ಪ್ರಾಣ ಉಳಿದಿದೆ. ಎಲ್ಲಾ ಘಟನೆಯನ್ನು ಹಿಂಬದಿಯ ಕಾರಿನಲ್ಲಿದ್ದವರು ಚಿತ್ರೀಕರಿಸಿ ಕೊಂಡಿದ್ದಾರೆ.
ವೀಡಿಯೋ ನೋಡಿ
ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣ ಮಾಡುವ ಪ್ರವಾಸಿಗರು ಇಂತಹ ತಪ್ಪನ್ನು ಆಗಿಂದಾಗ್ಗೆ ಮಾಡುತ್ತಲೇ ಇದ್ದಾರೆ. ಹೀಗಿದ್ದರೂ ಸಹ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ.