ಮಂಗಳೂರು: ಧರ್ಮ ದಂಗಲ್ ನ ಕಿಚ್ಚು ದಿನೇ ದಿನಕ್ಕೆ ಮತ್ತಷ್ಟು ಹೆಚ್ಚುತ್ತಿದ್ದು ಹಿಜಾಬ್ ನಿಂದ ಶುರುವಾದ ಅಭಿಯಾನ ಮೈಕ್, ಮಾವು, ಬಸ್ಸು, ಜ್ಯುವೆಲರಿ, ಎಲ್ಲವೂ ಆಯಿತು ಇದೀಗ ವಿ,ಹೆಚ್,ಪಿ, ಬಜರಂಗದಳ ನಮಗೆ ಮುಸ್ಲಿಂ ಶಾಸಕ ಬೇಡ ಹಿಂದೂ ಶಾಸಕ ಬೇಕು ಎಂದು ಧರ್ಮದ ಕಿಚ್ಚು ಹೊತ್ತಿಸಿದ್ದಾರೆ.
ಮಂಗಳೂರಿನ ಉಳ್ಳಾಲ ಶಾಸಕ ಯು.ಟಿ ಖಾದರ್ ನಮಗೆ ಬೇಡ ನಮಗೆ ಹಿಂದೂ ಶಾಸಕ ಬೇಕು ಎಂದು ಯು,ಟಿ,ಕೆ ವಿರುದ್ಧ ಫೀಲ್ಡ್ ಗಿಳಿದಿದ್ದಾರೆ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು.
ಧರ್ಮ ಯುದ್ಧ ಇಲ್ಲಿಗೆ ಮುಗಿಯುವಂತೆ ಕಾಣುತ್ತಿಲ್ಲ ಒಂದಲ್ಲ ಒಂದು ನೆಪದ ಮುಂದೆ ಧರ್ಮದ ಕಿಚ್ಚು ಹೊತ್ತುತ್ತಲೇ ಇದ್ದು ಸರ್ಕಾರ ಇದಕ್ಕೆ ಸರಿ ಸಾಟಿ ನೀಡುತ್ತಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಇದೀಗ ಒಂದು ಕಡೆ ಹಲವಾರು ಹಿಂದೂಗಳು ನೈಜ ಹಿಂದೂ ಎಂದು ಅಂದುಕೊಳ್ಳಲು ನಾಚಿಕೆಯಾಗುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.
ಇವರ ಧರ್ಮ ದಂಗಲ್ ನಿಂದ ಹಿಂದೂ ಧರ್ಮಕ್ಕೆ ನಿಜವಾದ ಅಪಾಯ ಎದುರಾಗಲಿದೆ ಎಂದು ಹಲವಾರು ಹಿಂದೂ ಬಾಂಧವರು ಪ್ರತಿಕ್ರಿಯಿಸಿದ್ದಾರೆ.