dtvkannada

'; } else { echo "Sorry! You are Blocked from seeing the Ads"; } ?>

ಪುತ್ತೂರು: ಕಾವು ಹೇಮನಾಥ ಶೆಟ್ಟಿ ನೇತೃತ್ವದಲ್ಲಿ ಈದ್ ಹಬ್ಬದ ಪ್ರಯುಕ್ತ ತನ್ನ ಆತ್ಮೀಯರು ಹಾಗೂ ಸ್ನೇಹಿತರ ಬಳಗದೊಂದಿಗೆ ಈದ್ ಸೌಹಾರ್ದ ಕೂಟವನ್ನು ಪುತ್ತೂರಿನ ಲಯನ್ಸ್ ಸೇವಾ ಸದನದಲ್ಲಿ ಗುರುವಾರ ಮಧ್ಯಾಹ್ನ ಏರ್ಪಡಿಸಲಾಯಿತು.

ಈ ಸೌಹಾರ್ದ ಕೂಟಕ್ಕೆ ವಿಶೇಷ ಅತಿಥಿಯಾಗಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದ್ ಹಾರಿಸ್ ನಲಪಾಡ್ ಆಗಮಿಸಿ ಶುಭಹಾರೈಸಿದರು. ನಂತರ ಮಾತನಾಡಿದ ಅವರು, ದೇಶದಲ್ಲಿ ಜನರ ಆರ್ಥಿಕ ಹೊಡೆತದಿಂದ ತತ್ತರಿಸಿಹೋಗಿದ್ದಾರೆ. ನಿರುದ್ಯೋಗ ಸಮಸ್ಯೆ ತಾಂಡವವಾಡ್ತಾ ಇದೆ. ಇಂದು ಈ ಊರಿನ ಯುವತಿ ಉದ್ಯೋಗವಿಲ್ಲವೆಂದು ಆತ್ಮಹತ್ಯೆ ಮಾಡುವ ಪರಿಸ್ಥಿತಿ ಉದ್ಭವವಾಗಿದೆ. ಇದು ಬಾರೀ ದೊಡ್ಡ ದುರಂತ. ಇದನ್ನು ತಡೆಯದೇ ಇದ್ದರೆ ಮುಂದಿನ‌ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ ಜನರು ಜಾಗೃತರಾಗಬೇಕು ಎಂದು ಹೇಳಿದರು. ಕಾವು ಹೇಮನಾಥ್ ಶೆಟ್ಟಿ ಯವರು ಆಯೋಜಿಸಿದ ಈ ಸೌಹಾರ್ದ ಸಭೆ ಸಾಮಾಜಿಕ ಬದಲಾವಣೆಗೆ ಸಹೋದರತ್ವ ಬೆಳೆಸಲು ಸಹಕಾರಿಯಾಗಿದೆ ಎಂದು ಹೇಳಿದರು.

'; } else { echo "Sorry! You are Blocked from seeing the Ads"; } ?>

ವಾಗ್ಮಿ, ಚಿಂತಕ ಇಕ್ಬಾಲ್ ಬಾಳಿಲ ಮಾತನಾಡಿ, ಈದ್ ಸಂದೇಶದೊಂದಿಗೆ ಸೌಹಾರ್ದತೆಯ ಸುಂದರ ಮಾತುಗಳನ್ನಾಡಿದರು. ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಮತ್ತು ಬದ್ದತೆ ಇರುವ ನಾಯಕ ಸಿದ್ದರಾಮಯ್ಯರಾದರೆ ಜಿಲ್ಲೆಯಲ್ಲಿ ಕಾವು ಹೇಮನಾಥ್ ಶೆಟ್ಟಿಯವರು ಎಂದರು. ರಾಜ್ಯದಲ್ಲಿ ಹಿಜಾಬ್ ವಿವಾದದಿಂದ ವಿದ್ಯಾರ್ಥಿಗಳು ಅತಂತ್ರ ವ್ಯವಸ್ಥೆಯನ್ನು ಎದುರಿಸುವಾಗ ಧ್ವನಿ ಎತ್ತಿದ ಏಕೈಕ ವ್ಯಕ್ತಿ ಹೇಮನಾಥ್ ಶೆಟ್ಟಿ ಎಂದು ಹೇಳಿದರು. ದೇಶದಲ್ಲಿ ಶಾಂತಿ ನೆಲೆಸಲು ಇಂತಹ ಕಾರ್ಯಕ್ರಮಗಳು ಪೂರಕ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಕೆ ಆರ್ ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿ, ಈದ್ ಸಂದೇಶಗಳನ್ನು ಸಾರುತ್ತಾ ರಂಝಾನ್ ತಿಂಗಳ ಉಪವಾಸದ ಮಹತ್ವಗಳನ್ನು ನೆರೆದಿರುವ ಜನರಿಗೆ ವಿವರಿಸಿದರು ಹಾಗೂ ಸೌಹರ್ದ ಕೂಟ ಏರ್ಪಡಿಸಿ ಜಾತ್ಯತೀತತೆಯನ್ನು ಎತ್ತಿ ಹಿಡಿದ ಕಾವು ಹೇಮನಾಥ ಶೆಟ್ಟಿಯವರಿಗೆ ಧನ್ಯವಾದವನ್ನು ತಿಳಿಸಿದರು. ಕಾವು ಹೇಮನಾಥ ಶೆಟ್ಟಿಯವರು ಪುತ್ತೂರಿನ ಡಿ.ಕೆ.ಶಿ ಎಂದು ಹೆಮ್ಮೆಯಿಂದ ಹೇಳಲು ಇಚ್ಚೆ ಪಡುತ್ತೇನೆ ಎಂದರು. ಎಲ್ಲಾ ಧರ್ಮಗಳ ಜನರನ್ನು ಜೊತೆಯಾಗಿ ಒಯ್ಯುವ ತಾಕತ್ತು ಇರುವ ನಾಯಕ ಹೇಮನಾಥ್ ಶೆಟ್ಟಿಯವರು. ಇವರ ನಾಯಕತ್ವವನ್ನು ಎಲ್ಲಾ ವರ್ಗದ ಜನರೂ ಒಪ್ಪಿಕೊಳ್ತಾರೆ. ಇಂತಹ ಕಾರ್ಯಕ್ರಮದಿಂದ ಸಮಾಜದಲ್ಲಿ ಬಹುದೊಡ್ಡ ಬದಲಾವಣೆಗಳು ಸಾಧ್ಯ ಎಂದು ಅಭಿಪ್ರಾಯಿಸಿದರು.

'; } else { echo "Sorry! You are Blocked from seeing the Ads"; } ?>

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರು, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರು, ಎನ್ ಕೆ ಜಗನ್ನಿವಾಸ್ ರಾವ್ ಹಾಗೂ ಎಂ.ಎಸ್ ಮೊಹಮ್ಮದ್ ರವರು ಆಗಮಿಸಿ ಸಂದೇಶದ ಜೊತೆಗೆ ಅರ್ಥಪೂರ್ಣ ಮಾತುಗಳನ್ನಾಡಿದರು.
ಸಮಾಜದಲ್ಲಿ ಎಲ್ಲಾ ಜಾತಿ ಧರ್ಮದವರು ಸಹೋದರರಂತೆ ಬದುಕಿದರೆ ದೇಶ ಸುಭದ್ರವಾಗಿರುತ್ತದೆ. ಮುಸಲ್ಮಾನರ ಪವಿತ್ರ ರಂಜಾನ್ ಉಪವಾಸ ದೇವರ ಹೆಸರಿನಲ್ಲಿ ನಡೆದರೂ ಬಡವರ ಬಡತನವನ್ನು ಶ್ರೀಮಂತರಿಗೂ ಅರಿವು ಮೂಡಿಸುವ ಉತ್ತಮ‌ ಸಂದರ್ಭ ಎಂದು ಕಾರ್ಯಕ್ರಮ ಆಯೋಜಿಸಿದ ಕಾವು ಹೇಮನಾಥ್ ಶೆಟ್ಟಿಯವರು ಹೇಳಿದರು.

ಬನ್ನೂರು ಚರ್ಚ್ ಧರ್ಮಗುರು ರೆ.ಫಾ.ಪ್ರಶಾಂತ್ ಶಾಂತಿ ಸೌಹಾರ್ದತೆಯ ಸಂದೇಶವನ್ನು ಸಾರಿದರು.
ಶಾಂತಿ ನೆಲೆಸಲು ಇಂತಹ ಕಾರ್ಯಕ್ರಮಗಳು ಅಗತ್ಯ. ನಾವೆಲ್ಲರೂ ಸಹೋದರರಾಗಿ ಬದುಕಿದರೆ ದೇಶ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಯಶಸ್ವಿ ಕಾರ್ಯಕ್ರಮಕ್ಕೆ ಹಲವಾರು ಗಣ್ಯರು ಆಗಮಿಸಿ ಅತಿಥ್ಯ ಸ್ವೀಕರಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯ ವ್ಯಕ್ತಿಗಳಿಗೆ ಹೂಗುಚ್ಚಾ ನೀಡಿ ಶಾಲು ಹಾಕಿ ಕಾವು ಹೇಮನಾಥ ಶೆಟ್ಟಿಯವರು ಗೌರವಪೂರ್ವಕವಾಗಿ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಸಂಕೇಶ್ ಉಸ್ತಾದ್, ಅನ್ಸಾರುದ್ದೀನ್, ಎಲ್ ಟಿ ರಝಾಕ್, ಸೂತ್ರಬೆಟ್ಟು ಜಗನ್ನಾಥ ರೈ, ಬಿಎ ರಹಿಮಾನ್, ಫಝಲ್ ರಹೀಂ, ನೆಟ್ಟಣಿಗೆದ ಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮೇಶ್ ರೈ ಸಾಂತ್ಯ ಸೇರಿ ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅದೇ ರೀತಿ ಪುತ್ತೂರು ತಾಲೂಕಿನ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಪ್ರಸಾದ್ ಪಾಣಾಜೆ, ಅನಿತಾ ಹೇಮನಾಥ ಶೆಟ್ಟಿ,ಫಾರೂಕ್ ಬಾಯಬೆ,ಹನೀಫ್ ಪುನ್ಚತ್ತಾರ್, ಅನ್ವರ್ ಖಾಸಿಂ,ಲ್ಯಾನ್ಸಿ ಮಸ್ಕರೆನಸ್, ಇಸಾಕ್ ಸಾಲ್ಮರ,ಫಝಲ್ ರಹೀಂ,ಮೋನು ಬಪ್ಪಳಿಗೆ,ಬಶೀರ್ ಪರ್ಲಡ್ಕ
ಶುಕೂರ್ ಹಾಜಿ‌ ಕಲ್ಲೆಗ
ಅಬ್ಬಾಸ್ ಮುರ, ಗಂಗಾಧರ್ ಶೆಟ್ಟಿ, ರವಿಚಂದ್ರ ಆಚಾರ್ಯ, ಇಸ್ಮಾಯಿಲ್ ಸಾಲ್ಮರ, ಮೋನು ಬಪ್ಪಳಿಗೆ, ದಿವ್ಯನಾಥ ಶೆಟ್ಟಿ, ಪಾವನ ರಾಮ್, ರಹಿಮಾನ್ ಸಂಪ್ಯ, ಅಮೀನ್ ಆಕರ್ಷನ್ ಮುಂತಾದ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.ನೇಮಾಕ್ಷ ಸುವರ್ಣ ನಿರೂಪಿಸಿ, ಕಾವು ಹೇಮನಾಥ ಶೆಟ್ಟಿಯವರು ಧನ್ಯವಾದಗೈದರು.ಕಾರ್ಯಕ್ರಮದ ಕೊನೆಗೆ ಭರ್ಜರಿ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!