ಪುತ್ತೂರು: ತಾಲೂಕಿನ ಬನ್ನೂರು ನಿವಾಸಿ ಅಹ್ಮದ್ ಇಕ್ಬಾಲ್ ಮತ್ತು ರಮ್ಲತ್ ದಂಪತಿಗಳ ಸುಪುತ್ರಿ ಫಾತಿಮಾ ಇರ್ಫಾನ ಇವರು ಎಸ್.ಎಸ್.ಎಲ್.ಸಿ ಯಲ್ಲಿ 623 ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ. ಸುಧಾನ ಇಂಗ್ಲೀಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿ ಫಾತಿಮಾ ಇರ್ಫಾನ ಸಾಧನೆಯನ್ನು ಗುರುತಿಸಿ ಪುತ್ತೂರು ಕಮ್ಯೂನಿಟಿ ಸೆಂಟರ್ ಇವರನ್ನು ಸನ್ಮಾನಿಸಿ ಗೌರವಿಸಿತು.
ಸೆಂಟರಿನ ವಿದ್ಯಾರ್ಥಿನಿ ವಿಂಗ್ ನ ಮೂಲಕ ಈ ಸನ್ಮಾನ ನೆರವೇರಿಸಲಾಯಿತು.
ಅದೇ ರೀತಿ ಸುಳ್ಯ ಅಡ್ಕಾರ್ ನ ಜಿ.ಎಂ. ಅಬ್ದುಲ್ಲಾ ಮತ್ತು ರಹಮತ್ತ್ ನಿಶಾ ದಂಪತಿಗಳ ಪುತ್ರ ಮುಹಮ್ಮದ್ ಆಫಿಲ್ ರವರು ಎಸ್.ಎಸ್.ಎಲ್.ಸಿ ಯಲ್ಲಿ 618 ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದನ್ನೂ ಗುರುತಿಸಿ ಸೆಂಟರ್ ಮೂಲಕ ಅಭಿನಂಧಿಸಲಾಯಿತು.
ಸೈಂಟ್ ಜೋಸೆಫ್ ಸ್ಕೂಲ್ ಸುಳ್ಯ ಇಲ್ಲಿನ ವಿದ್ಯಾರ್ಥಿಯಾದ ಇವರಿಗೆ ಆಶಿಕ್ ಅರಿಯಡ್ಕರವರು ಸನ್ಮಾನಿಸಿ ಗೌರವಿಸಿದರು.
ಪುತ್ತೂರು ಕಮ್ಯೂನಿಟಿ ಸೆಂಟರ್ ನ ಅರ್ಹತಾ ಪರೀಕ್ಷೆಯಲ್ಲೂ ಆಫಿಲ್ ರವರು ಸಾಧನೆ ಮಾಡಿದ್ದು ಇವರಿಗೆ ಸೆಂಟರ್ ಅವರು ಬಯಸಿದ ಕಾಲೇಜಿನಲ್ಲಿ ಪಿಯುಸಿಗೆ ದಾಖಲಾಗಲು ವಿದ್ಯಾರ್ಥಿ ವೇತನ ನೀಡಲಿದೆ.
ಶೈಕ್ಷಣಿಕ ಪ್ರಗತಿಗೆ ದುಡಿಯುತ್ತಿರುವ ಪುತ್ತೂರು ಕಮ್ಯೂನಿಟಿ ಸೆಂಟರ್ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಕೌನ್ಸಿಲಿಂಗ್ ನಡೆಸಲಿದೆ. ಪುತ್ತೂರು, ವಿಟ್ಲ, ಮಂಗಳೂರು ಸೆಂಟರಿನಲ್ಲಿ 21-5-2022 ರಿಂದ 30-5-2022 ರವರೆಗೆ ಈ ಕೌನ್ಸಿಲಿಂಗ್ ನಡೆಯಲಿದೆ. ನುರಿತ ಶಿಕ್ಷಣ ತಜ್ಞರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದು, ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನೂ ನೀಡಲಿದೆ ಎಂದು ಸೆಂಟರ್ ನ ಪ್ರಕಟನೆಯಲ್ಲಿ ತಿಳಿಸಲಾಗಿದೆ.