';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಕಲಬುರಗಿ: ಪ್ರೀತಿಗೆ ಪ್ರೀತಿ ಹರಿಸುವವರು ಹಿಂದೂಗಳು, ಪ್ರೀತಿಗೆ ರಕ್ತ ಹರಿಸುವವರು ಮುಸ್ಲಿಂ ಗೂಂಡಾಗಳು ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿ ಕಿಡಿಕಾರಿದ್ದಾರೆ.
ಮೇ 26ರಂದು ನಗರದ ವಾಡಿ ಪಟ್ಟಣದಲ್ಲಿ ಅನ್ಯಕೋಮಿನ ಯುವತಿಯನ್ನು ಪ್ರೀತಿಸಿದ್ದಕ್ಕೆ ಹಿಂದೂ ಯುವಕನ ಕೊಲೆ ಪ್ರಕರಣದ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರೀತಿಗೆ ಪ್ರೀತಿ ಹರಿಸುವವರು ಹಿಂದೂಗಳು. ಪ್ರೀತಿಗೆ ರಕ್ತ ಹರಿಸುವವರು ಮುಸ್ಲಿಂ ಗೂಂಡಾಗಳು. ಲವ್ ಜಿಹಾದ್ ಮಾಡಿ ಹಿಂದೂ ಯುವತಿಯರನ್ನು ಹಾಳು ಮಾಡುತ್ತಾರೆ. ಅದೇ ಹಿಂದೂ ಯುವಕ ಮುಸ್ಲಿಂ ಯುವತಿಯನ್ನ ಪ್ರೀತಿಸಿದರೆ, ಅವರ ಮೇಲೆ ದೌರ್ಜನ್ಯ ಎಸಗಿ ಕೊಲೆ ಮಾಡುತ್ತಾರೆ ಎಂದು ಸಿಡಿದರು.
ಈವರೆಗೆ ಚಿತ್ತಾಪುರ ತಾಲೂಕಿನಲ್ಲಿ ಮೂರು ತಿಂಗಳಲ್ಲಿ 3 ಕೊಲೆಗಳಾಗಿವೆ. ಆದರೂ ಶಾಸಕ ಪ್ರಿಯಾಂಕ್ ಖರ್ಗೆ ಇಲ್ಲಿಯ ತನಕ ಸಾಂತ್ವನ ಹೇಳಿಲ್ಲ. ಅದೇ ನಾವು ಹಿಂದೂ ಕಾರ್ಯಕರ್ತರ ಮನೆಗೆ ಹೊರಟರೆ ಬಂಧಿಸುತ್ತಾರೆ.