dtvkannada

ಮಂಗಳೂರು ನಗರ ಹೊರವಲಯದ ಕಣ್ಣೂರು ಮೈದಾನದಲ್ಲಿ ಎಸ್‌ಡಿಪಿಐ ಏರ್ಪಡಿಸಿದ ‘ಬೃಹತ್‌ ಜನಾಧಿಕಾರ ಸಮಾವೇಶ’ ದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತನೊಬ್ಬ ಪೊಲೀಸರನ್ನು ನಾಯಿಗೆ ಹೋಲಿಸಿ ನಿಂದಿಸಿದ ವೀಡಿಯೋ ವೈರಲ್‌ ಆಗಿದೆ.

ನಿನ್ನೆ ಸಂಜೆ ಮಂಗಳೂರಿನಲ್ಲಿ ಕಾರ್ಯಕ್ರಮ ಮುಗಿಸಿ ಎಸ್‌ಡಿಪಿಐ ಧ್ವಜದೊಂದಿಗೆ ಹೆಲ್ಮಟ್‌ ಧರಿಸದೇ ಬೈಕ್‌ನಲ್ಲಿ ಹಿಂತಿರುಗುತ್ತಿದ್ದ ಯುವಕರಿಬ್ಬರು ನಾಯಿಂಡೆ ಮೋನೆ ಆರ್‌ಎಸ್‌ಎಸ್‌ ಎಂದು ಘೋಷಣೆ ಕೂಗುತ್ತಾ ತೆರಳುತ್ತಿದ್ದರು.

ಬಳಿಕ ಅದನ್ನೇ ಮುಂದುವರೆಸಿ ನಾಯಿಂಡೆ ಮೋನೆ ಪೊಲೀಸ್‌ (ನಾಯಿಯ ಮಕ್ಕಳು ಪೊಲೀಸ್‌) ಎಂದು ಬ್ಯಾರಿ ಭಾಷೆಯಲ್ಲಿ ಪೊಲೀಸ್ ವಿರೋಧಿ ಘೋಷಣೆ ಕೂಗಿದ್ದು, ಇದನ್ನು ಅವರೊಂದಿಗೆಯೇ ಇದ್ದ ಯುವಕರು ವೀಡಿಯೋ ಮಾಡಿ ವೈರಲ್‌ ಮಾಡಿದ್ದಾರೆ.

ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ ಭಾರೀ ವೈರಲ್ ಆಗಿದೆ. ಪಕ್ಷದ ಹೆಸರನ್ನು ಹಾಳು ಮಾಡುವ ಉದ್ದೇಶದಿಂದ ಯಾರೋ ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪವು ಕೇಳಿ ಬರುತ್ತಿವೆ. ಯುವಕನ ಈ ನಡೆ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕ ವಲಯದ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ವಿಡಿಯೋ ವೈರಲ್ ಬೆನ್ನಲ್ಲೇ ಪೊಲೀಸರು ಘೋಷಣೆ ಕೂಗಿದವರಿಗಾಗಿ ಶೋಧ ನಡೆಸುತ್ತಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!