dtvkannada

'; } else { echo "Sorry! You are Blocked from seeing the Ads"; } ?>

ದಾನ ಮಾಡಿರಿ,ನಮಾಝ್ ಮಾಡಿರಿ,ಹಜ್ ಯಾತ್ರೆ ಕೈಗೊಳ್ಳಿರಿ ಎಂದಾಗಿರಲಿಲ್ಲ ಕುರಾನ್ ನ ಪ್ರಥಮ ಬೋಧನೆ.ಕುರಾನ್ ನ ಪ್ರಥಮ ಬೋಧನೆ ಯಾಗಿದೆ ಓದು (ಇಕ್ರಹ್) ಕುರಾನ್ ವಿದ್ಯೆಗೆ ಕೊಟ್ಟ ಪ್ರಥಮ ಪ್ರಾಶಸ್ತ್ಯ ಇದಾಗಿದೆ ಎಂದು ಕಲ್ಲಡ್ಕ ಖತೀಬ್ ಶೇಖ್ ಮಹಮ್ಮದ್ ಇರ್ಫಾನಿ ಹೇಳಿದರು. ಅವರು ಇಂದು ಗೋಳ್ತಮಜಲ್ ಜೆಮ್ ಆಂಗ್ಲ ‌ಮಾದ್ಯಮ ಶಾಲೆಯಲ್ಲಿ ಜರಗಿದ ಶಿಕ್ಷಕ ರಕ್ಷಕ ಸಭೆಯನ್ನು ಉದ್ಘಾಟಿಸಿ ಮಾತಾಡುತ್ತಿದ್ದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಇದರ ಸಲಹೆಗಾರರಾದ ರಫೀಕ್ ಮಾಸ್ಟರ್ ಮಾತನಾಡಿ ತಂದೆ ಮಗನ ಬಾಂಧವ್ಯವನ್ನು ಸ್ನೇಹಿತ, ಮಿತ್ರನಾಗಿ, ಕಂಡಲ್ಲಿ ಯಶಸ್ವಿನ ಮುನ್ನಡೆ ಕಾಣುವುದರಲ್ಲಿ ಅನುಮಾನ ಬೇಡ ಎಂದರು. ಮೀನು ಮಾರಾಟಗಾರ, ಮರ ಹತ್ತುವವರು, ಕೂಲಿಕಾರ್ಮಿಕರ ಮಕ್ಕಳು ಅದೇ ವ್ರತ್ತಿಯನ್ನು ಮಾಡಬೇಕೆಂದಿಲ್ಲ ವಿವಿಧ ಉನ್ನತ ಶಿಕ್ಷಣ‌ ಪಡೆದು ಉತ್ತಮ ಸ್ಥಾನ ಮಾನವನ್ನು ಪಡೆಯಬಹುದು ಎಂದು‌ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಮಾತಾಡಿದರು.

'; } else { echo "Sorry! You are Blocked from seeing the Ads"; } ?>

ಸಮಾರಂಭದ ಅಧ್ಯಕ್ಷತೆಯನ್ನು ಫಾತಿಮ ಮೆಮೊರಿಯಲ್ ಎಜುಕೇಶನ್ ಟ್ರಸ್ಟ್ ಇದರ ಅದ್ಯಕ್ಷರಾದ ಹಾಜಿ.ಮಹಮ್ಮದ್ ಹನೀಫ್ ವಹಿಸಿದರು.ಫಾತಿಮ ಮೆಮೊರಿಯಲ್ ಎಜುಕೇಶನ್ ಟ್ರಸ್ಟ್ ಇದರ ಸಂಚಾಲಕರಾದ ಅಹ್ಮದ್ ಮುಸ್ತಫಾ ಅತಿಥಿಗಳ ಪರಿಚಯ ಮಾಡಿದರು.ಶಾಲಾ ನಿಯಮ ನಿಬಂಧನೆಗಳನ್ನು ಮುಖ್ಯ ಶಿಕ್ಷಕ ನಿರಂಜನ್ ತಿಳಿಯ ಪಡಿಸಿದರು.

ವೇದಿಕೆಯಲ್ಲಿ ಶಿಕ್ಷಕ ರಕ್ಷದ ಸಂಘದ ಅದ್ಯಕ್ಷರಾದ ಹಮೀದ್ ಅಲಿ,ಉಪಾಧ್ಯಕ್ಷೆ ಶ್ರೀಮತಿ ಪುಷ್ಪ ಮಕ್ಕಳ ಸುರಕ್ಷ ಸಮಿತಿಯ ಅದ್ಯಕ್ಷರಾದ ಅಬ್ದುಲ್ ಹಮೀದ್ ಗೋಳ್ತಮಜಲ್ ಉಪಸ್ಥಿತರಿದ್ದರು.

'; } else { echo "Sorry! You are Blocked from seeing the Ads"; } ?>

ಅತ್ಯಅಧಿಕ ಎಸ್ ಎಸ್ ಎಲ್ ಸಿ ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕಾರಮಾಡಲಾಯಿತು. ಶಿಕ್ಷಕಿಯರಾದ ನಾಝಿಯಾ ಸ್ವಾಗತಿಸಿದರು,ಭವ್ಯ ವಂದಿಸಿ,ತಾಹಿರಾ ಕಾರ್ಯಕ್ರಮ ನಿರೂಪಿಸಿದರು.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!