';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬಂಟ್ವಾಳ: ನೀರು ತೆಗೆಯಲು ಎಂದು ಬಾವಿ ಬಳಿ ತೆರಳಿದ ನವವಧು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕಲ್ಲಡ್ಕ ಎಂಬಲ್ಲಿ ಇಂದು ನಡೆದಿದೆ.
ಮೃತಪಟ್ಟ ಯುವತಿ ಫರಂಗಿಪೇಟೆ ನಿವಾಸಿ ಮುಹಮ್ಮದ್ ಎಂಬವರ ಪುತ್ರಿ ಮುನೀಝಾ(20) ಎಂದು ತಿಳಿದು ಬಂದಿದೆ.
ಈಕೆ ನೀರು ತೆಗೆಯಲೆಂದು ಬಾವಿ ಕಡೆ ಹೊರಟಿದ್ದು, ಕೆಲ ಸಮಯ ಕಳೆದರು ಮನೆ ಕಡೆ ತಿರುಗಿ ಬಂದಿರಲಿಲ್ಲ. ಇದನ್ನು ಗಮನಿಸಿದ ಮನೆಯವರು ಮುನೀಝಾ ಎಷ್ಟು ಹೊತ್ತಾದರು ಯಾಕೆ ಬಂದಿಲ್ಲಾ ಎಂದು ಬಾವಿ ಬಳಿ ನೋಡಿದಾಗ ಕೊಡಪಾನ ಬಾವಿಯಲ್ಲಿ ತೇಲುವುದು ಕಂಡು ಬಾವಿಯೊಳಗೆ ನೋಡಿದಾಗ ಮುನೀಝಾ ನೀರಿನಲ್ಲಿ ಬಿದ್ದು ಮುಳುಗಿರುವುದು ಬೆಳಕಿಗೆ ಬಂದಿದೆ.
ಯುವತಿಯ ಮೃತದೇಹವನ್ನು ಮೇಲಕ್ಕೆತ್ತಿದ್ದು ಮೃತದೇಹವವು ಬಂಟ್ವಾಳ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
ಎರಡು ತಿಂಗಳ ಹಿಂದೆಯಷ್ಟೇ ಮುನೀಝಾ ರವರ ವಿವಾಹ ಕಲ್ಲಡ್ಕ ನಿವಾಸಿ ತೌಸೀರ್ ಎಂಬವರ ಜೊತೆ ನಡೆದಿದ್ದು.ಮದುವೆ ಸಂಭ್ರಮ ಮರೆಮಾಚುವ ಮುನ್ನವೇ ಇದೀಗ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.