ಮಾಣಿ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಭರದಿಂದ ನಡೆಯುತ್ತಿದೆ. ಬಿಸಿರೋಡ್ ನಿಂದ ಉಪ್ಪಿನಂಗಡಿ ವರೆಗೆ ಸಂಚರಿಸುವವರನ್ನು ಎಚ್ಚರಿಸಲು ಲೇಖಕ ಇಸ್ಮಾಯಿಲ್ ಝುಹ್ರಿ ಗಡಿಯಾರ ರವರು ಕೆಲವು ದಿನಗಳ ಹಿಂದೆ ಸಾಮಾಜಿಕ ತಾಣದಲ್ಲಿ ಲೇಖನವೊಂದನ್ನು ಹರಿಯಬಿಟ್ಟಿದ್ದರು. ಅದರಲ್ಲಿ ಅವರು ಧೂಳು ಮತ್ತು ಕೆಸರಿನ ಮಧ್ಯೆ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ವಾಹನ ಸವಾರರಿಗೆ ಅದರಲ್ಲೂ ದ್ವಿಚಕ್ರ ವಾಹನ ಸವಾರರನ್ನು ಬಹಳಷ್ಟು ಎಚ್ಚರಿಸಿದ್ದರು.
ಹಾಗೇಯೇ ಆಗುತ್ತಿದೆ ಕೂಡಾ.! ಮಂಗಳವಾರದಂದು ಸುರಿದ ಸಣ್ಣ ಮಳೆಗೆ ಸೂರಿಕುಮೇರು ದಾಸಕೋಡಿ ಮಧ್ಯೆ ಹಲವಾರು ಬೈಕ್ಗಳು ಸ್ಕಿಡ್ ಆಗಿ ಬಿದ್ದಿವೆ. ಸಣ್ಣಪುಟ್ಡ ಗಾಯದೊಂದಿಗೆ ಮತ್ತು ಕೆಸರನ್ನು ಮೆತ್ತಿಕೊಂಡು ಎದ್ದು ಹೋಗುತ್ತಿದ್ದಾರೆ.
ಆದರೆ ಇದು ಬಹಳ ಅಪಾಯಕಾರಿಯಾಗಿದ್ದು ದ್ವಿಚಕ್ರ ವಾಹನಗಳ ಹಿಂದಿನಿಂದ ಘನ ವಾಹನಗಳು ನಿರ್ಲಕ್ಷ್ಯವಾಗಿ ಅತೀ ವೇಗದಿಂದ ಬರುತ್ತಿದ್ದು ಸ್ಕಿಡ್ ಆಗಿ ಬೀಳುವ ವಾಹನಗಳ ಪಾಲಿಗೆ ಇದು ಅತ್ಯಂತ ಅಪಾಯ ಸಂಭವಿಸುವ ಸಾಧ್ಯತೆ ಇದೆ.
ಎಷ್ಟು ಸಾಧ್ಯವೋ ಅಷ್ಟು ಮೆಲ್ಲ ಮತ್ತು ಜಾಗರೂಕತೆಯಿಂದ ಸಂಚರಿಸುವುದು ಎಲ್ಲಾ ವಾಹನ ಚಾಲಕರ ಕರ್ತವ್ಯವಾಗಿದೆ. ಆದ್ದರಿಂದ ವಾಹನ ಚಲಾಯಿಸುವಾಗ ತುಂಬಾನೆ ಎಚ್ಚರ ವಹಿಸಿ.