';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬೆಂಗಳೂರು: ಪತಿಯೇ ಪತ್ನಿಯನ್ನು ಚಾಕುವಿನಿಂದ ಹತ್ಯೆಗೈದು ಪೊಲೀಸರಿಗೆ ಮಾಹಿತಿ ಕೊಟ್ಟಿರುವ ಘಟನೆ ಯಶವಂತಪುರದ ಮತ್ತಿಕೆರೆ ಬಳಿ ಬುಧವಾರ ಬೆಳಿಗ್ಗೆ ( ಜೂ 22 ರಂದು) ನಡೆದಿದೆ.
ಅನಸೂಯ (42) ಹತ್ಯೆಗೀಡಾದ ಪತ್ನಿ. ತಾನೇಶ್ ಕೊಲೆಗೈದ ಪತಿ.
ತಾನೇಶ್ ಮೈತುಂಬಾ ಸಾಲ ಮಾಡಿಕೊಂಡಿದ್ದ. ಆಗಾಗ ಪತಿ – ಪತ್ನಿ ನಡುವೆ ಜಗಳ ನಡೆಯುತ್ತಿತ್ತು. ಕೌಟುಂಬಿಕ ಕಲಹ ಹೆಚ್ಚಾಗಿ ತಾನೇಶ್ ಪತ್ನಿಯನ್ನು ಕೊಲೆಗೈದಿದ್ದಾನೆ ಎನ್ನಲಾಗಿದೆ. ಪತ್ನಿ ಅನುಸೂಯಳನ್ನು ಕೊಲೆಗೈದು 13 ವರ್ಷದ ಮಗಳನ್ನು ಹತ್ಯೆ ಮಾಡಲು ಮುಂದಾಗಿದ್ದ. ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ.
ಪತ್ನಿ ಕೊಲೆ ಮಾಡಿ ಹೆದರಿದ್ದ ತಾನೇಶ್ ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿ, ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾನೆ.
ಆರೋಪಿ ತಾನೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ಯಶವಂತಪುರ ಠಾಣೆಯಲ್ಲಿ ದಾಖಲಾಗಿದೆ.