';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಸುಳ್ಯ(ಜೂ.21): ಎಸ್‌ಡಿಪಿಐ ಪಕ್ಷದ 13 ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಸಂಪಾಜೆ ಗ್ರಾಮ ಸಮಿತಿಯ ವತಿಯಿಂದ ಕಲ್ಲುಗುಂಡಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
ಎಸ್‌ಡಿಪಿಐ ಸಂಪಾಜೆ ಗ್ರಾಮ ಸಮಿತಿಯ ಉಪಾಧ್ಯಕ್ಷರಾದ ಹುಝೈಫ ದಂಡಕಜೆ ಧ್ವಜಾರೋಹಣ ನೆರವೇರಿಸಿದರು.
ಎಸ್‌ಡಿಪಿಐ ಸುಳ್ಯ ವಿಧಾನ ಸಭಾಕ್ಷೆತ್ರ ಸಮಿತಿ ಸದಸ್ಯರಾದ ಸಿದ್ದೀಕ್ ಕೊಡಿಯಮ್ಮೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿಯ ಜೊತೆ ಕಾರ್ಯದರ್ಶಿ ಒವೈಸ್ ಸಂಪಾಜೆ, ಎಸ್‌ಡಿಪಿಐ ಸುಳ್ಯ ರೂರಲ್ ಬ್ಲಾಕ್ ಉಪಾಧ್ಯಕ್ಷರಾದ ಸಲೀಂ ದರ್ಕಾಸ್, ಎಸ್ ಡಿ ಪಿ ಐ ಮುಖಂಡರುಗಳಾದ ಹಮೀದ್ ಬಿಳಿಯಾರು, , ಫಾರೂಕ್ ಕಾನಕ್ಕೋಡ್, ಅರಂಬೂರು ಬೂತ್ ಅಧ್ಯಕ್ಷರಾದ ಅಲ್ತಾಫ್ ಪೆರಾಜೆ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಸಂಪಾಜೆ ಗ್ರಾಮ ಸಮಿತಿಯ ಕಾರ್ಯದರ್ಶಿ ಶರೀಫ್ ಸೆಟ್ಟಿಯಡ್ಕ ಸ್ವಾಗತಿಸಿ, ಕಡೆಪಾಲ ಬೂತ್ ಸಮಿತಿಯ ಅಧ್ಯಕ್ಷರಾದ ಸಾಜಿದ್ ಐ.ಜಿ. ವಂದಿಸಿದರು.