ಪುತ್ತೂರು: ದೆಹಲಿಯಲ್ಲಿ ನಡೆಯಲಿರುವ ಸುಪರ್ ಲೀಗ್ ಕ್ರಿಕೇಟ್ ಪಂದ್ಯಾಟದಲ್ಲಿ ಆಡಲು ಬೆಂಗಳೂರಿನ ಬುಲ್ಸ್ ತಂಡಕ್ಕೆ ಆಯ್ಕೆಯಾಗಿರುವ ಪುತ್ತೂರು ತಾಲೂಕಿನ ವಿದ್ಯಾರ್ಥಿಗಳಾದ ಕೂರ್ನಡ್ಕದ ನಿಶಾದ್, ಕಬಕದ ರಿಹಾನ್ ರಿಗೆ ಪುತ್ತೂರು ಕಮ್ಯೂನಿಟಿ ಸೆಂಟರ್ ಮೂಲಕ ಅಭಿನಂಧಿಸಿ ಬಿಳ್ಕೊಡಲಾಯಿತು.
ಪುತ್ತೂರು ಪಾಣಾಜೆ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಮಹಮ್ಮದ್ ಕುಕ್ಕುವಳ್ಳಿ ಮತ್ತು ಕಮ್ಯೂನಿಟಿ ಸೆಂಟರ್ ನ ವಿದ್ಯಾರ್ಥಿಗಳು ಈ ಅಭಿನಂದನೆ ಕಾರ್ಯಕ್ರಮ ನಡಸಿಕೊಟ್ಟರು
ಸಂಜಯ್ ನಗರದ ನಿವಾಸಿ ಹಮೀದ್ ಮತ್ತು ಮಿಸ್ರಿಯಾ ದಂಪತಿಗಳ ಪುತ್ರನಾಗಿರುವ ಪುತ್ತೂರು ಪಾಂಗ್ಲೈ ಬೆಥನಿ ಹೈಸ್ಕೂಲ್ ನಲ್ಲಿ ಹತ್ತನೇ ತರಗತಿ ಕಲಿಯುತ್ತಿರುವ ನಿಶಾದ್ ರವರು, ಬ್ಯಾಟಿಂಗ್, ಬೌಲಿಂಗ್ ಸೇರಿದಂತೆ ಆಲ್ ರೌಂಡರ್ ಆಗಿ ಅಂಡರ್ -16 ರ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮಡಿಕೇರಿ ಸೋಮವಾರ ಪೇಟೆ ನಿವಾಸಿಯಾಗಿರುವ ಅಬ್ದುಲ್ ರಝಾಕ್ ಮತ್ತು ರಶೀದಾ ದಂಪತಿಗಳ ಪುತ್ರ, ಪ್ರಸ್ತುತ ಕಬಕದಲ್ಲಿದ್ದು, ಫಿಲೋಮಿನಾದಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಮಹಮ್ಮದ್ ರಿಹಾಂ ಅಂಡರ್ -19 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರು ಅತ್ಯುತ್ತಮ ಬ್ಯಾಟ್ಸ್ ಮಾನ್ ಮತ್ತು ವಿಕೇಟ್ ಕೀಪರ್ ಆಗಿರುತ್ತಾರೆ.
ಪುತ್ತೂರು ಕ್ರಿಕೇಟ್ ಆಖಾಡಮಿಯ ಕೋಚ್ ಹರಿಶ್ಚಂದ್ರ ಆಚಾರ್ಯರಿಂದ ತರಬೇತಿ ಪಡೆದ ಈ ವಿದ್ಯಾರ್ಥಿಗಳು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಥಾನಪಡೆದು ದೆಹಲಿಯಲ್ಲಿ ನಡೆಯುವ ಕ್ರಿಕೇಟ್ ಸರಣಿಗೆ ಆಯ್ಕೆ ಆಗಿದ್ದಾರೆ.
ಇವರಂತ ಹಲವು ಕ್ರೀಡಾಪಟುಗಳು ತಾಲೂಕಿನಲ್ಲಿ ಬೆಳಗಲಿ ಎಂಬ ಉದ್ದೇಶದಿಂದ ಪುತ್ತೂರು ಕಮ್ಯೂನಿಟಿ ಸೆಂಟರ್ ಇವರನ್ನು ಸನ್ಮಾನಿಸಿ ಗೌರವಿಸಿ, ಅಭಿನಂದಿಸಿದೆ..