';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಸುಳ್ಯ: ಎರಡು ದಿನಗಳ ಹಿಂದೆಯಷ್ಟೆ ಕೊಡಗು ದಕ್ಷಿಣ ಕನ್ನಡ ಗಡಿ ಪ್ರದೇಶದಲ್ಲಿ ಲಘು ಭೂಕಂಪನದಿಂದ ಆತಂಕ ಸೃಷ್ಟಿಸಿದ್ದ ಭೂಮಿ ಮಂಗಳವಾರ ಬೆಳಗ್ಗೆ 7.45 ರ ವೇಳೆಗೆ ಮತ್ತೆ ಕಂಪಿಸಿದೆ.
ಸುಳ್ಯ ತಾಲೂಕಿನ ಬಹುತೇಕ ಕಡೆ ಶಬ್ದದೊಂದಿಗೆ ಎರಡು ಮೂರು ಸೆಕೆಂಡುಗಳಷ್ಟು ಕಂಪಿಸಿದೆ. ಗೂನಡ್ಕ, ಪೆರಾಜೆ, ಕಲ್ಲುಗುಂಡಿ, ಅರಂತೋಡು, ಜಾಲ್ಸೂರು ಭಾಗದಲ್ಲಿ ಕಂಪನದ ಅನುಭವವವಾಗ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಬೆಳಂಬೆಳಗ್ಗೆ ಮತ್ತೆ ಭೂ ಕಂಪನದಿಂದ ಸುಳ್ಯ ಭಾಗದ ಜನರು ಬೆಚ್ಚಿಬಿದ್ದಿದ್ದಾರೆ. ಕಂಪನದ ತೀವ್ರತೆ ಮೊನ್ನೆಗಿಂತ ಹೆಚ್ಚು ಇತ್ತು ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.