ಬುರೈದ: ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ಬುರೈದ ವತಿಯಿಂದ ಸ್ನೇಹ ಸಮ್ಮಿಲನ ಕುಟುಂಬ ಸಮ್ಮಿಲನ ಕಾರ್ಯಕ್ರಮವು ದಿನಾಂಕ 23 ನೇ ಗುರುವಾರ ರಾತ್ರಿ ಬುರೈದದ ಅಲ್-ಸಧೀಮ್ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.
ಬುರೈದದ ವಿವಿಧ ಭಾಗಗಳಿಂದ ಅನಿವಾಸಿ ಭಾರತೀಯರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು ಇಂಡಿಯನ್ ಸೋಶಿಯಲ್ ಫೋರಂ ಕೇರಳ ಬ್ಲಾಕ್ ಅಧ್ಯಕ್ಷರಾದ ಫಿರೋಜ್ ಪಿ.ಕೆ. ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಇಂಡಿಯನ್ ಸೋಶಿಯಲ್ ಫೋರಂ ಬುರೈದ ಬ್ಲಾಕ್ ಅಧ್ಯಕ್ಷರಾದ ಅಬ್ದುಲ್ ರಶೀದ್ ಉಚ್ಚಿಲ ಮಾತನಾಡಿ, ಇಂಡಿಯನ್ ಸೋಶಿಯಲ್ ಫೋರಂ ಸೌದಿ ಅರೇಬಿಯಾದಲ್ಲಿ ಹಲವಾರು ವರ್ಷಗಳಿಂದ ಅನಿವಾಸಿ ಭಾರತೀಯರ ಸೇವೆಯಲ್ಲಿ ತೊಡಗಿದ್ದು ಎಲ್ಲರೂ ಅನಿವಾಸಿ ಭಾರತೀಯರ ಸಂಕಷ್ಟ ನಿವಾರಿಸಲು ಇಂಡಿಯನ್ ಸೋಶಿಯಲ್ ಫೋರಂ ನೊಂದಿಗೆ ಕೈ ಜೋಡಿಸಲು ಕರೆ ನೀಡಿದರು.
ದಿಕ್ಸೂಚಿ ಭಾಷಣ ಮಾಡಿದ ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯ ಸಮಿತಿ ರಿಯಾದ್ ಇದರ ಸದಸ್ಯರಾದ ಅಬೂಬಕ್ಕರ್ ಸಿದ್ದಿಕ್ ಮಾತನಾಡಿ, ದೇಶದಲ್ಲಿ ಆಡಳಿತ ನಡೆಸುತ್ತಿರುವ ಫ್ಯಾಸಿಸ್ಟ್ ಸರಕಾರವು ಸಾಂವಿಧಾನಿಕ ಮೌಲ್ಯಗಳನ್ನು ನಾಶಪಡಿಸುವಲ್ಲಿ ಸಫಲತೆಯನ್ನು ಕಾಣುತ್ತಿದೆ. ಇದರ ವಿರುದ್ಧ ಹೋರಾಡಲು ಮತ್ತು ದೇಶದ ಎಲ್ಲಾ ವರ್ಗದ ಜನರ ಹಕ್ಕುಗಳ ಸಂರಕ್ಷಣೆಗಾಗಿ ನಾವೆಲ್ಲರೂ ಒಂದಾಗಬೇಕೆಂದು ಕರೆ ನೀಡಿದರು.
ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ಸಾದಿಕ್ ಕಾಟಿಪಳ್ಳ, G.G.C.C. ಮಲ್ಲೂರ್ ಅಧ್ಯಕ್ಷ ಉಮರ್ ಫಾರೂಕ್, ಉದ್ಯಮಿ ಇನಾಯತ್ ಅಲಿ ಬೆಂಗಳೂರು, ಇಂಡಿಯಾ ಫ್ರೆಟರ್ನಿಟಿ ಫೋರಂ ಬುರೈದ ಅಧ್ಯಕ್ಷರಾದ ಅಯಾಜ್ ಕಾಟಿಪಳ್ಳ, ಗಲ್ಫ್ ಕಮಿಟಿ ಅಡ್ಡೂರ್ ಅಧ್ಯಕ್ಷ ಎ.ಕೆ. ಅಬ್ದುಲ್ ರಝಕ್, ಕೆ.ಐ.ಸಿ. ಕುಂಬ್ರ ಅಧ್ಯಕ್ಷ ಅಶ್ರಫ್ ಬುಳ್ಳೇರಿಕಟ್ಟೆ, ಮರ್ಕಝುಲ್ ಹುದಾ ಅಧ್ಯಕ್ಷ ಸಯ್ಯದ್ ವೈ.ಎಂ.ಕೆ. ಮತ್ತು ನಜಮ್ ರಫೀಕ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭ ದಲ್ಲಿ ಹಲವಾರು ಜನರು ಇಂಡಿಯನ್ ಸೋಶಿಯಲ್ ಫೋರಂನ ತತ್ವ ಮತ್ತು ಸಿದ್ದಂತಗಳಿಗೆ ಒಪ್ಪಿ ಹೊಸ ಸದಸ್ಯತ್ವ ಸ್ವೀಕರಿಸಿದರು.
ಇಂಡಿಯನ್ ಸೋಶಿಯಲ್ ಫೋರಂ ಬುರೈದ ಕಾರ್ಯಕಾರಿ ಸಮಿತಿ ಸದಸ್ಯ ಸಯ್ಯದ್ ಪೂಂಜಲಕಟ್ಟೆ ಸ್ವಾಗತಿಸಿದರು. ಇಂಡಿಯನ್ ಸೋಶಿಯಲ್ ಫೋರಂ ಕಾರ್ಯಕರ್ತರಾದ ಝಕರಿಯ ಕೊರಂಗೀಲ ಕಾರ್ಯಕ್ರಮ ನಿರೂಪಿಸಿದರೆ ಮೊಯಿನುದ್ದೀನ್ ಪಡುಬಿದ್ರಿ ಧನ್ಯವಾದ ಸಮರ್ಪಿಸಿದರು.
ಸಾಕಷ್ಟು ಕುತೂಹಲ ಕೆರಳಿಸಿದ ಕ್ರೀಡಾಕೂಟದಲ್ಲಿ, ಕ್ರಿಕೆಟ್ ಮತ್ತು ವಾಲಿಬಾಲ್ ಪಂದ್ಯಾಟದಲ್ಲಿ ಮೊದಲ ಸ್ಥಾನವನ್ನು ಅಲ್ ಹರ್ಬಿ ಕ್ರಿಕೆಟರ್ಸ್ ಪಡೆದರೆ ದ್ವಿತೀಯ ಸ್ಥಾನವನ್ನು ಫ್ರೆಂಡ್ಸ್ ಫಾರ್ ಎವರ್ ಪಡೆಯಿತು. ಹಗ್ಗಜಗ್ಗಾಟದಲ್ಲಿ ಕಾಕಾ ಗೈಸ್ ಮೊದಲ ಸ್ಥಾನ ತನ್ನದಾಗಿಸಿಕೊಂಡರೆ ದ್ವಿತೀಯ ಸ್ಥಾನ ಬುರೈದ ಫ್ರೆಂಡ್ಸ್ ಪಡೆಯಿತು. ಹಾಗೂ ಮಹಿಳೆಯರಿಗಾಗಿ ಮತ್ತು ಮಕ್ಕಳಿಗಾಗಿ ಅನೇಕ ಆಕರ್ಷಕ ಕ್ರೀಡೆ ಏರ್ಪಡಿಸಲಾಯಿತು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಸಯೀದ್ ಅಲಿ ಕಿನ್ನಿಗೋಳಿ, ಸಾದಿಕ್ ಕಾಟಿಪಳ್ಳ, ಮೊಯಿನುದ್ದೀನ್ ಪಡುಬಿದ್ರಿ, ಆಸೀಫ್ ಸಾಲ್ಮರ, ಹಫೀಜ್ ಕೃಷ್ಣಾಪುರ, ಸಿದ್ದಿಕ್ ಮಲ್ಲೂರ್, ಹಮೀದ್ ಕಿಬಾ, ಷರೀಫ್ ಕುಕ್ಕುವಳ್ಳಿ ,ಗುಲ್ ಝರ್ ಅಡ್ಡೂರ್, ರಫೀಕ್ ನಜಮ್, ರಿಯಾಜ್ ಸಚ್ಚರಿಪೇಟೆ ಮತ್ತು ಅದ್ದು ಉಪಸ್ಥಿತರಿದ್ದರು.