';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬಂಟ್ವಾಳ: ಯುವಕನೊಬ್ಬನನ್ನು ಕತ್ತಿಯಿಂದ ಕಡಿದು ಭೀಕರ ಕೊಲೆ ನಡೆಸಿದ ಘಟನೆ ಜುಲೈ 4 ರಂದು ಮಧ್ಯರಾತ್ರಿ ವೇಳೆ ಕೈಕಂಬದ ತಲಪಾಡಿ ಎಂಬಲ್ಲಿ ನಡೆದಿದೆ.
ಶಾಂತಿ ಅಂಗಡಿ ನಿವಾಸಿ ಮಹಮ್ಮದ್ ಆಶಿಫ್ (29 ವ) ಕೊಲೆಯಾದ ಯುವಕ. ಅತನ ಸ್ನೇಹಿತರಾದ ನೌಫಾಲ್ ಮತ್ತು ಇನ್ನೋರ್ವ ಈ ಕೃತ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇವರು ಗಾಂಜ ಗಿರಾಕಿಗಳಾಗಿದ್ದು, ತಲಪಾಡಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಹೊಟೇಲ್ ಒಂದರ ಸಮೀಪದಲ್ಲಿ ರಾತ್ರಿ ಒಂದು ಗಂಟೆಯ ವೇಳೆ ಮಾತಿಗೆ ಮಾತು ಬೆಳೆದು ಗಾಂಜ ವಿಚಾರದಲ್ಲಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಮೂವರು ಗಾಂಜ ಸೇವಕರು ಮತ್ತು ಮಾರಾಟಗಾರರು ಎಂಬ ಮಾತುಗಳು ಸ್ಥಳೀಯರಿಂದ ಹೇಳಲಾಗುತ್ತಿದ್ದು, ಇತ್ತೀಚಿಗೆ ಗಾಂಜಾ ವಿಚಾರದಲ್ಲಿ ಗಲಾಟೆಗಳು ನಡೆಯುವುದು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ಘಟನಾ ಸ್ಥಳಕ್ಕೆ ಪೋಲೀಸ್ ಇನ್ಸ್ಪೆಕ್ಟರ್ ವಿವೇಕಾನಂದ, ಎಸ್.ಐ.ಅವಿನಾಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.