ಚಾಮರಾಜನಗರ: ತನ್ನ ಜನ್ಮದಿನದಂದೇ ಡೆತ್ನೋಟ್ ಬರೆದಿಟ್ಟು ಉಪನ್ಯಾಸಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರದ ಜೆಎಸ್ಎಸ್ ಕಾಲೇಜಿನಲ್ಲಿ ನಡೆದಿದೆ.
ಇಲ್ಲಿನ ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ನಿವಾಸಿಯಾಗಿದ್ದ ಚಂದನಾ (26) ಕಾಲೇಜಿನ ಹಾಸ್ಟೆಲ್ನಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವಿವಾಹಿತೆಯಾಗಿದ್ದ ಚಂದನಾ, ಯಳಂದೂರು ತಾಲ್ಲೂಕು ಅಂಬಳೆ ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕ ಮಹದೇವಸ್ವಾಮಿ ಎಂಬುವರ ಪುತ್ರಿ. ಇವರು ನಗರದ ಜೆಎಸ್ಎಸ್ ಕಾಲೇಜಜಿನಲ್ಲಿ ಜೀವಶಾಸ್ತ್ರ ಉಪನ್ಯಾಸಕಿಯಾಗಿದ್ದರು.
ಹುಟ್ಟುಹಬ್ಬದ ದಿನವೇ ಚಂದನಾ ಆತ್ಮಹತ್ಯೆ ಮಾಡಿಕೊಂಡಿದ್ದು ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ.
ಇಂದು ಅವರ ಜನ್ಮದಿನವಾಗಿದ್ದು ಹಾಸ್ಟೆಲ್ ಸಹೋದ್ಯೋಗಿಗಳು ಬೆಳಗ್ಗೆ ಶುಭ ಕೋರಿದ್ದಾರೆ. ತಿಂಡಿಗೆ ಕರೆದಾಗ ನನ್ನ ಮೂಡ್ ಚೆನ್ನಾಗಿಲ್ಲ ಆಮೇಲೆ ಬರುತ್ತೇನೆ ಎಂದು ಹೇಳಿದ್ದಾರೆ. ಕೆಲ ಸಮಯದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.