ಉಡುಪಿ: ಪ್ರತಿಯೊಂದು ವಸ್ತುವಿಗೂ ಒಂದೊಂದು ಸಮಯ ನಿಗದಿಪಡಿಸಲಾಗಿದೆ ಆದರೆ ರೋಗಿಯ ಜೀವಕ್ಕೆ ಬೇಕಾದ ರಕ್ತವನ್ನು ನೀಡಲು ಯಾವುದೇ ಸಮಯದ ನಿಗದಿ ಇಲ್ಲ ದಾನಿಗಳು ತಕ್ಷಣ ಸ್ಪಂದಿಸುವುದೇ ಸಮಯದ ನಿಗದಿ ಎಂದು ಭಾರತೀಯ ಜನತಾ ಪಕ್ಷದ ಬೈಂದೂರು ಮಂಡಲ ಬ್ಲಾಕ್ ಅದ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ ಹೇಳಿದರು.

ಅವರು ಇಂದು ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಸಹಕಾರದಲ್ಲಿ ಮರ್ಹೂಂ ಹಾಜಿ ತಾರಪತಿ ಮುಹಮ್ಮದ್ ಹುಸೈನ್ ಸ್ಮರಣಾರ್ಥ 76ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಿರೂರ್ ಎಸೋಸಿಯೇಶನ್,
ಇಸ್ಲಾಹಿ ತಂಝೀಮ್ ಶಿರೂರ್,
ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಬೈಂದೂರು ತಾಲೂಕು ಘಟಕ, ಬುಖಾರಿ ಯಂಗ್ ಸ್ಟಾರ್ ಶಿರೂರ್, ರೋಯಲ್ ಕಾರ್ ವಾಶ್ ಶಿರೂರ್ ಅಮ್ನ ಜನರಲ್ ಸರ್ವೀಸ್ ಶಿರೂರು ಇವುಗಳ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ರಕ್ತನಿಧಿ ಕುಂದಾಪುರ ಇವರ ಸಹಬಾಗಿತ್ವ ದಲ್ಲಿ
ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ)ಸಂಸ್ಥೆಯ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ ಸಂಸ್ಥೆಯ 144ನೇ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರವನ್ನುಸ್ವಾತಂತ್ರ್ಯೋತ್ಸವದ ಅಮ್ರತ ಮಹೋತ್ಸವ ಕಾರ್ಯಕ್ರಮದಲ್ಲಿ ಶಿರೂರ್ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶಿಬಿರ ಉದ್ಘಾಟಿಸಿ ಮಾತಾಡುತ್ತಿದ್ದರು.

ಸಮಾರಂಭದ ಅದ್ಯಕ್ಷತೆ ವಹಿಸಿ ಮಾತಾಡಿದ ಉದ್ಯಮಿ ಖಲೀಫಾ ಮಹಮ್ಮದ್ ತಿರುಮಂಜೇಶ್ವರ ಮಾತಾಡಿ ಸಾರ್ವಜನಿಕ ಸಮಾರಂಭದಲ್ಲಿ ಜನರು ಸೇವೆ,ಸಹಾಯ, ಸೇರಿದಂತೆ ರಕ್ತದಾನದಂತಹ ಅತ್ಯುತ್ತಮ ಕಾರ್ಯಕ್ರಮ ಸಂಘಟಿಸುವುದು ಶ್ಲಾಘನೀಯ ಎಂದು ಹೇಳಿದರು. ವೇದಿಕೆಯಲ್ಲಿ ಕೆನರಾ ಮುಸ್ಲಿಂ ಕಲ್ಜಿ ಕೌನ್ಸಿಲ್ ಅದ್ಯಕ್ಷರಾದ ಯೂನುಸ್ ಕಾಝಿಯಾ, ಬೈಂದೂರು ತಾಲೂಕು ಪಂಚಾಯತ್ ನಿಕಟಪೂರ್ವ ಸದಸ್ಯ ಮೌಲಾನಾ ದಸ್ತಗಿರ್ ಸಾಹೇಬ್,ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಇದರ ಅದ್ಯಕ್ಷರಾದ ಸಂತೋಷ್ ಶೆಟ್ಟಿ, ಶಿರೂರು ಉದ್ಯಮಿ ಯಂ ಯಂ,ಜಿಫ್ರೀ, ಶಿರೂರು ಪದವಿ ಪೂರ್ವ ಕಾಲೇಜ್ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಸತೀಶ್ ಪ್ರಭು,ಶಿರೂರು ಇಸ್ಲಾಹಿ ತಂಝಿಮ್ ಇದರ ಅದ್ಯಕ್ಷರಾದ ಮೌಲಾನಾ ಬಾವುದ್ದೀನ್ ಪಾರಿ,ಶಿರೂರು ಗ್ರಾಮ ಪಂಚಾಯತ್ ಅದ್ಯಕ್ಷರಾದ ದಿಲ್ಶಾದ್ ಬೇಗಂ. ಶಿರೂರು ಏಸೋಶಿಯೇಶನ್ ಪ್ರತಿನಿಧಿ ರಿಯಾಝ್ ಎ,ಪತ್ರಿಕಾ ವರದಿಗಾರ ಅರುಣ್ ಕುಮಾರ್,ಬಹುಕಾರಿ ಯಂಗ್ ಸ್ಟಾರ್ ಶಿರೂರು ಇದರ ಮುಖ್ಯಸ್ಥ ಎಸ್ ಎಂ ಸವೂದು,ನಾವುಂದ ಮುಹಿಯ್ಯುದ್ದೀನ್ ಜುಮ್ಮಾ ಮಸೀದಿಯ ಅದ್ಯಕ್ಷರಾದ ಮಹಮ್ಮದ್ ಇಕ್ಬಾಲ್, ಬೈಂದೂರು ರೆಡ್ ಕ್ರಾಸ್ ಸೊಸೈಟಿ ಇದರ ಅದ್ಯಕ್ಷರಾದ ನಿತಿನ್ ಶೆಟ್ಟಿ, ಉಪಸ್ಥಿತರಿದ್ದರು. ಸಮಾರಂಭದಲ್ಲಿ ಶಿರೂರು ಪಂಚಾಯತ್ ಪ್ರತಿನಿಧಿಗಳಾದ ಉದಯ ಪೂಜಾರಿ, ಹಾಗೂ ಅಲ್ತಾಫ್ ಮುಕ್ರಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನ ಮಾಡಲಾಯಿತು. ಮೌಲಾನಾ ಅಬ್ದುಲ್ ಮನ್ನಾನ್ ನದ್ವಿ ಪುತ್ರಿ ಫಾತಿಮಾ ಇಝಾ ಕಿರಾಅತ್ ಪಠಿಸಿದರು.ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಕಾರ್ಯನಿರ್ವಾಹಕ ಮನ್ಸೂರ್ ಇಬ್ರಾಹಿಂ ಪ್ರಸ್ತಾಪಿಸಿದರು. ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಮುಖ್ಯ ಸಲಹೆಗಾರ ಫಯಾಝ್ ಅಲಿ ಸ್ವಾಗತಿಸಿದರು. ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಮಾದ್ಯಮ ವಿಭಾಗದ ಮುಖ್ಯಸ್ಥ ಅಬ್ದುಲ್ ಹಮೀದ್ ಗೋಳ್ತಮಜಲ್ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
