ಮಂಗಳೂರು, ಆ 14 : ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಸಂಸ್ಥೆಯ ಸದಸ್ಯರಾದ ‘ಮರ್ಹೂಂ ಫಾಝಿಲ್ ಮಂಗಳಪೇಟೆ ರವರ ಸ್ಮರಣಾರ್ಥ’ ಸಮಸ್ತ ಮಂಗಳಪೇಟೆ ನಾಗರಿಕರು ಜಂಟಿ ಆಶ್ರಯದಲ್ಲಿ ಆಶಾ ಜ್ಯೋತಿ ರಕ್ತಕೇಂದ್ರ ಶಿವಮೊಗ್ಗ ರಕ್ತನಿಧಿಯ
ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ 14 ಆಗಸ್ಟ್ 2022 ನೇ ಆದಿತ್ಯವಾರದಂದು ಮಂಗಳಪೇಟೆಯ ಎಂ.ಜೆ.ಎಂ ಹಾಲ್ ನಲ್ಲಿ ಯಶಸ್ವಿಯಾಗಿ ನಡೆಯಿತು.
ಮಂಗಳಪೇಟೆ MJM ಖತೀಬರಾದ ಬಹು| ಶಫೀಕ್ ಸಖಾಫಿಯವರು ಶಹೀದ್ ಫಾಝಿಲ್ ರವರ ಖಬರ್ ಬಳಿ ಸಮೂಹ ಪ್ರಾರ್ಥನೆ ಮಾಡುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.ಸದರ್ ಮುಅಲ್ಲಿಂ ಬಹು|ಶಂಸುದ್ದೀನ್ ಅಹ್ಸನಿ ಉಪಸ್ಥಿತರಿದ್ದರು.
ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರದಲ್ಲಿ 209 ಮಂದಿ ಜನಸ್ನೇಹಿ ರಕ್ತದಾನಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ ದುಷ್ಕರ್ಮಿಗಳ ದಾಳಿಗೆ ಬಲಿಯಾದ ಫಾಝಿಲ್ ನಿಗೆ ಗೌರವಾರ್ಪಣೆ ಸಲ್ಲಿಸಿದರು.ಫಾಝಿಲ್ ರವರ ತಂದೆ ಫಾರೂಕ್ ಹಾಗೂ ಸಹೋದರ ಆದಿಲ್ ರವರು ಶಿಬಿರದಲ್ಲಿ ಭಾಗಿಯಾಗಿ ರಕ್ತದಾನಿಗಳನ್ನು ಹುರಿದುಂಬಿಸಿ ಮಾದರಿಯಾದರು.
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಕಾರ್ಯನಿರ್ವಾಹಕರು ಹಾಗೂ ಸಮಸ್ತ ಮಂಗಳಪೇಟೆ ನಾಗರಿಕರು ಇದರ ಪದಾಧಿಕಾರಿಗಳು ಸ್ವಯಂ ಸೇವಕರಾಗಿ ಸಹಕರಿಸಿದರು.