ಬೆಂಗಳೂರು: ಚಿತ್ರರಂಗದ ಖ್ಯಾತ ನಟ, ಕೆ.ಜಿ.ಎಫ್ ಖ್ಯಾತಿಯ ಹರೀಶ್ ರಾಯ್ ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು ಇದೀಗ ಚಿಕಿತ್ಸೆಗಾಗಿ ಆರ್ಥಿಕ ನೆರವಿನ ಮೊರೆ ಹೋಗಿದ್ದಾರೆ.

ತನ್ನ ಮಕ್ಕಳು ಚಿಕ್ಕವರು ಎಂಬ ಕಾರಣಕ್ಕೆ ಹಾಗೂ ‘‘ಕೆಜಿಎಫ್ 2’’ ಚಿತ್ರದ ಶೂಟಿಂಗ್ ಇದೆ ಎಂಬ ಕಾರಣದಿಂದ ಅವರು ಚಿಕಿತ್ಸೆ ಪಡೆಯಲು ತಡ ಮಾಡಿದರು. ಹಣದ ಕೊರತೆ ಕೂಡ ಇದ್ದಿದ್ದರಿಂದ ಅವರು ಕಷ್ಟ ಅನುಭವಿಸಿದರು.ನಂತರ ವೈದ್ಯರನ್ನು ಭೇಟಿ ಮಾಡಿದಾಗ ಹರೀಶ್ ರಾಯ್ ಅವರಿಗೆ ಕ್ಯಾನ್ಸರ್ ಇರುವುದು ತಿಳಿದುಬಂದಿದೆ.ಕೂಡಲೇ ಆಪರೇಷನ್ ಮಾಡಿಸಲಾಯಿತು.
ಆಪರೇಷನ್ ನಂತರ ಕೂಡ ಕೆಲವು ಸಮಸ್ಯೆಗಳು ಎದುರಾದವು. ಈ ಬಗ್ಗೆ ಅಳಲು ತೋಡಿಕೊಂಡಿರುವ ನಟ ಹರೀಶ್ ರಾಯ್ ‘ವೈದ್ಯರು ನಾಲ್ಕನೇ ಸ್ಟೇಜ್ ಎಂದರು. ಇನ್ನು ನನಗೆ ಎಷ್ಟು ಟೈಮ್ ಉಳಿದಿದೆ ಅಂತ ಕೇಳಿದೆ. ಮೂರು ವರ್ಷ ಹೆದರಬೇಡಿ ಅಂತ ಡಾಕ್ಟರ್ ಹೇಳಿದ್ರು.
ರೇಡಿಯೋ ಥೆರಪಿ ವರ್ಕ್ ಆಗದ ಕಾರಣ ಬೇರೆ ಮಾತ್ರೆ ನೀಡುತ್ತಿದ್ದಾರೆ. ಆ ಮಾತ್ರೆಗಳಿಗೆ ಖರ್ಚು ಜಾಸ್ತಿ. ತಿಂಗಳಿಗೆ 3.5 ಲಕ್ಷ ಖರ್ಚಾಗಬಹುದು. 8-10 ತಿಂಗಳು ಮಾತ್ರೆ ತೆಗೆದುಕೊಳ್ಳಬೇಕು ಅಂತ ವೈದ್ಯರು ಹೇಳಿದ್ದಾರೆ’’ ಎಂದು ಹರೀಶ್ ರಾಯ್ ಮಾತನಾಡಿದ್ದಾರೆ.
ಹರೀಶ್ ರಾಯ್ ಅವರ ಚಿಕಿತ್ಸೆಗೆ ಹಣದ ಅನಿವಾರ್ಯತೆ ಇದೆ. ‘ಫ್ಯಾಮಿಲಿ ಅನ್ನೋರು ಯಾರೂ ಬರಲ್ಲ. ಕಷ್ಟದಲ್ಲಿ ಅವರು ಸಹಾಯ ಮಾಡಲ್ಲ. ಜನರು ಬರುತ್ತಾರೆ’ ಎಂದು ಅವರು ನಂಬಿದ್ದಾರೆ. ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.

‘ಕೆಜಿಎಫ್ 2 ಸಿನಿಮಾ ಶೂಟಿಂಗ್ ಸಂದರ್ಭದಲ್ಲೂ ನನಗೆ ಗಂಟಲಲ್ಲಿ ಗಡ್ಡೆ ಇತ್ತು. ಆದರೂ ಕೂಡ ನಾನು ಶೂಟಿಂಗ್ ಮಾಡಿದೆ. ಫೈಟಿಂಗ್ ಸೀನ್ ಸಹ ಮಾಡಿದೆ. ಗಡ್ಡೆ ಯಾರಿಗೂ ಕಾಣಿಸುತ್ತಿರಲಿಲ್ಲ. ನಾನು ಯಾರಿಗೂ ಹೇಳಲಿಲ್ಲ. ನಾನೇ ಮುಚ್ಚುಮರೆ ಮಾಡಿದೆ’ ಎಂದು ಹರೀಶ್ ರಾಯ್ ಹೇಳಿದ್ದಾರೆ.
‘ಎಲ್ಲರಿಗೂ ಈ ಸಮಸ್ಯೆ ಬಗ್ಗೆ ಗೊತ್ತಾದರೆ ಆಫರ್ ಬರುವುದಿಲ್ಲ ಅಂತ ಭಯ ಆಯ್ತು. ಹಾಗಾಗಿ ಕೆಜಿಎಫ್ 2 ಚಿತ್ರ ರಿಲೀಸ್ ಆದ ಬಳಿಕ ಕೆಲವರಿಗೆ ನಾನು ಸಂದರ್ಶನ ಕೊಟ್ಟಿಲ್ಲ. ಅವರೆಲ್ಲ ತಪ್ಪು ತಿಳಿದುಕೊಂಡಿದ್ದಾರೇನೋ ಗೊತ್ತಿಲ್ಲ’ ಎಂದು ಹರೀಶ್ ರಾಯ್ ಹೇಳಿದ್ದಾರೆ.
ಈಗ ಕನ್ನಡ ಚಿತ್ರರಂಗದ ಕೆಲವು ಸ್ಟಾರ್ ಕಲಾವಿದರು ಅವರ ಸಹಾಯಕ್ಕೆ ಧಾವಿಸಿದ್ದಾರೆ. ಹೆಸರು ಹೇಳಲು ಇಚ್ಛಿಸಿದೇ, ಚಿಕಿತ್ಸೆಗೆ ಬೇಕಾಗುವ ಹಣವನ್ನು ನೀಡಲು ಕನ್ನಡದ ಖ್ಯಾತ ಹೀರೋ ಒಬ್ಬರು ಮುಂದೆ ಬಂದಿದ್ದಾರೆ ಎಂದು ಹರೀಶ್ ರಾಯ್ ಅವರು ತಿಳಿಸಿದ್ದಾರೆ.
ಉಡುಪಿ ಮೂಲದ ಖ್ಯಾತ ನಟ ಹರೀಶ್ ರಾಯ್ ಉಡುಪಿ ಹೆಸರಾಂತ ಆಚಾರ್ಯ ಮನೆತನದ ಕುಡಿ. ಈ ಹಿಂದೆ ಉಡುಪಿಯಲ್ಲಿ ಒಂದು ರೌಡಿಸಂ ನಲ್ಲಿ ಹೆಸರು ಮಾಡಿದ್ದರು.ಈಗಿನ ಭೂಗತ ದೊರೆ ಬನ್ನಂಜೆ ರಾಜ ಹಾಗೂ ಹರೀಶ್ ರಾಯ್ ತಂಡದ ನಡುವೆ ಯಾವಾಗಲೂ ಹೊಡೆದಾಟ ನಡೆಯುತ್ತಿತ್ತು.

ಪಾಂಗಾಳ ರಾಮ ಎಂಬ ದೊಡ್ಡ ರೌಡಿ ನೋಡಲು ಹರೀಶ್ ರಾಯ್ ಥರ ಇದ್ದ.ಪಾಂಗಾಳ ರಾಮ ಮಾಡಿದ್ದ ದರೋಡೆ ಪ್ರಕರಣ ಒಂದರಲ್ಲಿ ಪೊಲೀಸರು ಹರೀಶ್ ರಾಯ್ ಅವರನ್ನು ವಿಚಾರಣೆ ಕರೆದುಕೊಂಡು ಹೋಗಿದ್ದರು.
ಹಣದ ವಿಚಾರದಲ್ಲಿ ಯಾರೂ ಮಾಡಿದ್ದ ಬಚ್ಚೀರೆ ಮಾಸ್ಟರ್ ಕೊಲೆ ಪ್ರಕರಣದಲ್ಲಿ ಹರೀಶ್ ರಾಯ್ ಜೈಲು ಪಾಲಾಗಿದ್ದರು. ನಂತರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಹರೀಶ್ ರಾಯ್ ಖಳನಾಯಕನಾಗಿ ಮಿಂಚಿದ್ದರು.
ಈಗ ಕೆಜಿಎಫ್ ನಲ್ಲಿ ನಟಿಸಿ ಬಹಳ ಹೆಸರುವಾಸಿಯಾಗಿದ್ದರು.ಆದರೆ ದೇವರು ಈಗ ಅವರ ಬಾಳಿನಲ್ಲಿ ಕ್ಯಾನ್ಸರ್ ಎಂಬ ಕಾಯಿಲೆ ಕೊಟ್ಟು ಅವರ ಅಭಿಮಾನಿಗಳಿಗೆ ಬಹಳ ಅಘಾತ ಉಂಟಾಗಿದೆ.ಇನ್ನೂ ಒಂದು ಆಪರೇಶನ್ ಬಾಕಿ ಇದ್ದು ಮುಂದಕ್ಕೆ ಏನು ಸಂಭವಿಸುವುದು ದೇವರೇ ಬಲ್ಲ.ಏನಾದರೂ ಆದಷ್ಟು ಬೇಗ ಗುಣಮುಖನಾಗಿ ಬರಲಿ ಎಂದೇ ಅಭಿಮಾನಿಗಳ ಆಶಯ..