ಬಿ.ಸಿ.ರೋಡ್: ತಲಪಾಡಿಯಲ್ಲಿ ಕಾರ್ಯಚರಿಸುತ್ತಿರುವ ಡೈಮಂಡ್ ಇಂಟರ್ ನ್ಯಾಷನಲ್ ಸ್ಕೂಲ್ ಇದರ ಶಿಕ್ಷಕ ರಕ್ಷಕ ಸಭೆ ಬಹಳಷ್ಟು ಯಶಸ್ವಿಯಾಗಿ ನಡೆಯಿತು.
ಆರಂಭದಲ್ಲಿ ಕುರ್ಆನ್ ಪಠಣದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಾಲೆಯ ವೈವಿಧ್ಯಮಯ ಆಕರ್ಷಕ ವಾದ ಚಟುವಟಿಕೆಗಳನ್ನು ನಡೆದು ಬಂದ ದಾರಿಯನ್ನು ಮುಗ್ದ ಮಗುವಿನ ಮನಸ್ಸನ್ನು ವಿಕಸನಗೊಳಿಸುವ ಚೈತನ್ಯ ವನ್ನು ಬಹಳಷ್ಟು ಅರ್ಥ ಪೂರ್ಣವಾಗಿ ಪ್ರಾಸ್ತಾವಿಕ ವಾಗಿ ಸಭೆಗೆ ಶಿಕ್ಷಕಿ ಅಲೆನ್ ತಿಳಿಯಪಡಿಸಿದರು.
ಬಳಿಕ ಶಾಲಾ ಅದ್ಯಕ್ಷರಾದ ಸನಾ ಅಲ್ತಾಫ್ ಮಾತಾಡಿ ಮುಗ್ದ ಮಗುವಿನ ಮನಸ್ಸು ಹೊಡೆದಾಟಕ್ಕೂ, ಬಡಿದಾಡುವುದಕ್ಕೂ, ಮರುಕ್ಷಣವೇ ರಾಜಿಯಾಗಲೂ ಬಯಸುತ್ತಿದ್ದ ಆ ಮಕ್ಕಳನ್ನು ತಿದ್ದಿತೀಡಿ ಅವರ ಬದುಕನ್ನೇ ಸಂತೋಷ ದಿಂದ ಕೂಡಿದ ವಾತಾವರಣ ನಿರ್ಮಿಸಲು ನಮ್ಮ ಶಿಕ್ಷಕರು ಪಡುವ ಪಾಡು ಶ್ಲಾಘನೀಯ ಈ ಬಗ್ಗೆ ಹೆತ್ತವರು ರಕ್ಷಕರು ಯಾವ ರೀತಿಯ ಅಭಿಪ್ರಾಯ ಪಟ್ಟರು ನಮ್ಮ ಶಿಕ್ಷಕ ವ್ರಂದ ಗಮನಿಸುವುದಿಲ್ಲ ನಮ್ಮ ಒಂದೇ ಗುರಿ ಮಕ್ಕಳು ಉತ್ತಮ ರಲ್ಲಿ ಉತ್ತಮ ರಾಗ ಬೇಕಾಗಿದೆ ಆ ನಿಟ್ಟಿನಲ್ಲಿ ನಮ್ಮ ಪಯಣ ಸಾಗಲಿದೆ.
ಇದುಸತ್ಯ ನಿಮ್ಮ ಸಹಕಾರ ನಮ್ಮೊಂದಿಗೆ ಇರಲಿ ಎಂದು ಅರ್ಥಪೂರ್ಣ ವಾಗಿ ಸಭೆಯನ್ನು ಉದ್ದೇಶಿಸಿ ಬಹಳಷ್ಟು ವಿಷಯಗಳ ಬಗ್ಗೆ ಮಕ್ಕಳ ಅಭಿವೃದ್ಧಿಯ ಬಗ್ಗೆ ಮಾತಾಡಿದರು.
ವೇದಿಕೆಯಲ್ಲಿ ಶಾಲಾ ಪ್ರಿನ್ಸಿಪಲ್ ಗಿರೀಶ್ ಕಾಮತ್ ಉಪ ಪ್ರಿನ್ಸಿಪಲ್ ರೇವತಿ ಉಪಸ್ಥಿತರಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ನೀಡಲಾಯಿತು. ರಕ್ಷಕರಲ್ಲಿರುವ ಹಲವು ಪ್ರಶ್ನೆಗಳನ್ನು ಸಮರ್ಪಕವಾಗಿ ಪರಿಹರಿಸಲಾಯಿತು. ಶಾಲಾ ವಿದ್ಯಾರ್ಥಿಗಳಾದ ರಿಮ್ಸಾ ಹಾಗೂ ನಫಾ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.