ಪುತ್ತೂರು: ಹೃದಯಾಘಾತದಿಂದ ಯುವಕನೋರ್ವ ಮೃತಪಟ್ಟ ಘಟನೆ ತಾಲೂಕಿನ ಮಾಡಾವು ಸಮೀಪದ ಕಟ್ಟತ್ತಾರು ಎಂಬಲ್ಲಿ ಸಂಭವಿಸಿದೆ.
ಕಟ್ಟತ್ತಾರು ನಿವಾಸಿ ಶಬೀರ್(25.ವ) ಮೃತ ಯುವಕ.
ಎದೆ ನೋವು ಕಾಣಿಸಿಕೊಂಡ ಶಬೀರ್ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮಂಗಳೂರು ಏನಪೋಯ ಆಸ್ಪತ್ರೆ ರೋಗಿಗಳನ್ನು ಕರೆದುಕೊಂಡು ಹೋಗಲು ಮತ್ತು ಅವರಿಗೆ ಎಲ್ಲ ರೀತಿಯ ನೆರವನ್ನು ನೀಡುತ್ತಿದ್ದ ಶಬೀರ್ ಅ.2ರಂದು ಏನಪೋಯ ಆಸ್ಪತ್ರೆ ಸಹಯೋಗದಲ್ಲಿ ಕಟ್ಟತ್ತಾರಿನಲ್ಲಿ ನಡೆಯಲಿರುವ ಆರೋಗ್ಯ ಶಿಬಿರ ಕಾರ್ಯಕ್ರಮ ಆಯೋಜನೆಗೆ ಮುತುವರ್ಜಿ ವಹಿಸಿ ಸಿದ್ಧತಾ ಕೆಲಸ ಮಾಡಿಕೊಂಡಿದ್ದರು ಎಂದು ಮೃತರ ದೊಡ್ಡಪ್ಪ ಅಬ್ದುಲ್ ರಹಿಮಾನ್ ಗುತ್ತಿಗಾರು ತಿಳಿಸಿದ್ದಾರೆ.
ಉತ್ತಮ ವ್ಯಕ್ತಿತ್ವ ಹಾಗೂ ಸ್ಥಳೀಯವಾಗಿ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ಶಬೀರ್ ಅವರ ನಿಧನದಿಂದ ಕಟ್ಟತ್ತಾರು ಪರಿಸರದಲ್ಲಿ ಸ್ಮಶಾನ ಮೌನ ಆವರಿಸಿದೆ.
ಮೃತರು ತಂದೆ ಇಸ್ಮಾಯಿಲ್ ಗುತ್ತಿಗಾರು, ತಾಯಿ ಮರಿಯಮ್ಮ, ಸಹೋದರ ಶಾಕಿರ್, ಸಹೋದರಿಯರಾದ ಶಬೀನ ಹಾಗೂ ಸಮೀರಾ ಅವರನ್ನು ಅಗಲಿದ್ದಾರೆ.