ಜುಬೈಲ್ : ವರ್ಣ ರಂಜಿತ ಸೌದಿ ಪ್ರೀಮಿಯರ್ ಲೀಗ್ 3 ನೇ ಆವೃತಿಯ ಮೂರು ವಾರಗಳ ಕ್ರಿಡಾಕೂಟಕ್ಕೆ ಜುಬೈಲ್ ನ ಅಲ್ ಫಲಾಹ್ ಮೈದಾನದಲ್ಲಿ ಬಿಎಮ್ ಶರೀಫ್ ಅಲ್ ಮುಝೈನ್ ಹಾಗೂ ಬಶೀರ್ ಅಲ್ ಫಲಕ್ ರವರು ಪಥವನ್ನು ಸೈಪುಲ್ಲ ತೋಡಾರ್, ಸಲೀಮ್ ಉಡುಪಿ, ಇಬ್ಬ ಬಜ್ಪೆ ಹಾಗೂ ಶಮೀರ್ ಅಹ್ಮದ್ ಬಾವರವರಿಗೆ ಹಸ್ತಾಂತರಿಸುವ ಮೂಲಕ ಪಥ ಸಂಚಲನಕ್ಕೆ ಚಾಲನೆ ನೀಡಿದರು. ಮೈದಾನದಲ್ಲಿ 8 ತಂಡಗಳ ಆಟಗಾರರು ಹಾಗೂ ಆಯಾ ತಂಡದ ಪಥವನ್ನು ಎತ್ತಿ ಹಿಡಿದು ಪುಟಾಣಿ ಮಕ್ಕಳು ಪಥ ಸಂಚಲನಕ್ಕೆ ಮೆರುಗು ನೀಡಿದರು.
ಮೊದಲ ದಿನವಾದ ಗುರುವಾರ ರಾತ್ರಿ 5 ಪಂದ್ಯಗಳು ಹಾಗೂ ಎರಡನೇ ದಿನ ಶುಕ್ರವಾರ 7 ಪಂದ್ಯಗಳು ಆಡಿಸಲಾಯಿತು. ಕೆಎಮ್ಟಿ ಸ್ಟೈಕರ್ಸ್ ಆಡಿದ ನಾಲ್ಕು ಪಂದ್ಯಗಳನ್ನು ಗೆದ್ದು 8 ಅಂಕಗಳೊಂದಿಗೆ ಮೊದಲ ವಾರದ ಅಂಕ ಪಟ್ಟಿಯ ಮೊದಲ ಸ್ಥಾನ ಕಾಯ್ದುಕೊಂಡಿದೆ. ಆರೆಂಜ್ ಕ್ಯಾಪ್ ಲೀಡಿಂಗ್ ರನ್ ಸ್ಕೋರರ್ ಸುಧೀರ್ ಶೆಟ್ಟಿ ಆಡಿದ ನಾಲ್ಕು ಪಂದ್ಯದಲ್ಲಿ 103 ರನ್ ಹಾಗೂ ಪರ್ಪಲ್ ಕ್ಯಾಪ್ ಲೀಡಿಂಗ್ ವಿಕೇಟ್ ಟೇಕರ್ ಕ್ರಿಷ್ಣಕುಮಾರ್ ಕೆಎಮ್ಟಿ ಸ್ಟೈಕರ್ಸ್ ಪರ ಆಡಿದ ನಾಲ್ಕು ಪಂದ್ಯದಲ್ಲಿ 9 ವಿಕೆಟ್ ಕಿತ್ತು ಮೊದಲ ಸ್ಥಾನದಲ್ಲಿದ್ದಾರೆ.
ಸಭಾ ಕಾರ್ಯಕ್ರಮದ ಮೊದಲಿಗೆ ಸಫ್ವಾನ್ ಬಜ್ಪೆ ಎಸ್ಪಿಎಲ್ ಪ್ರತಿಜ್ಞೆ ಹೇಳಿಕೊಡುವುದರೊಂದಿಗೆ ಸಭಾಕಾರ್ಯಕ್ರಮವನ್ನು ಆರಂಭಿಸಿದರು. ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಅಡ್ಕ ಕಾಂಟ್ರಾಕ್ಟಿಂಗ್ ಕಂಪೆನಿಯ ಶೇಖ್ ಅಹ್ಮದ್ ಬಾವ ಹಾಗೂ ಅದ್ಯಕ್ಷತೆಯನ್ನು ಫಹದ್ ಅಲ್ ತಮೀಮಿ ಇದರ ವ್ಯವಹಾರ ಸಲಹೆಗಾರರಾದ ಅಬ್ದುಲ್ ಅಝೀಝ್ ವಹಿಸಿ ಮಾತನಾಡಿದರು.
ಮ್ಯಾಕ್ ಝಿಗ್ಮಾ (ಕಪ್ತಾನ ಬಿಜು ಬಾಲು) ಹಾಗೂ ಆರ್ಬಿರೈಡರ್ಸ್ (ಮೊಹಮ್ಮದ್ ಆಝಾದ್) ನಡುವಿನ ಮೊದಲ ಪಂದ್ಯಕ್ಕಾಗಿ ವೇದಿಕೆಯಲ್ಲಿ ಅಬ್ದುಲ್ ಅಝೀಝ್ ರವರ ನೇತೃತ್ವದಲ್ಲಿ ನಝೀರ್ ಕಲ್ಲೂರ್, ಫಯಾಝ್ ಹಾಗೂ ಸೈಫುಲ್ಲ ತೋಡಾರ್ ರವರ ಮಗನಾದ ಮೊಹಮ್ನದ್ ಶಝಾನ್ ಅವರು ನಾಣ್ಯ ಚಿಮ್ಮುವಿಕೆ ನಡೆಸಿಕೊಟ್ಟರು. ಅಥಿತಿಯಾಗಿ ಶರೀಫ್ ಅಲ್ ಮುಝೈನ್, ನಝೀರ್ ಹುಸೈನ್ ಅಲ್ ಫಲಾಹ್, ಪೊರ್ಟ್ ವೇ ಇದರ ಮೆಹಮ್ಮದ್ ಫಾರೂಕ್, ಆಮ್ಪ್ಲಿಟ್ಟ್ಯೂಡ್ ಕಂಪೆನಿಯ ಜುನೇದ್ ಹುಸೈನ್, ಕ್ಲೌಡ್ 7 ಇದರ ಅಬ್ದುಲ್ ಸತ್ತಾರ್, ಅಬ್ದುಲ್ ರಝಾಕ್ ಹಾಗೂ ಸಿದ್ದೀಖ್ ಕೆಎಮ್ಟಿ ಬ್ಲೂ ಲೈನ್ ಕಾಂಟ್ರಾಕ್ಟಿಂಗ್, ಅಶ್ಫಾಕ್ ಪ್ಲಾಂಟ್ ಸೊಲುಷ್ಯನ್, ಮೂಸ ಗಲ್ಫ್ ಮೆಡಿಕಲ್ ಸೆಂಟರ್, ಗೋಪಾಲ್ ಮಾಸ ಅಲ್ ಖೋಬರ್, ಅಬ್ದುಲ್ ರಶೀದ್ ಭಾಮಾ ಅಸೋಸಿಯೇಶನ್ ಬಜ್ಪೆ ಶಾಹುಲ್ ಡೇವಿಡಾಗ್, ಯೂನುಸ್ ಸಾಂಡ್ ಟೆಕ್ ಹಾಗೂ ಸಮಾಜ ಸೇವಕ ನಝೀರ್ ಅಹ್ಮದ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸೈಫುಲ್ಲ ತೋಡಾರ್ ನಿರೂಪಿಸಿ ನಝೀರ್ ಕಲ್ಲೂರ್ ವಂದಿಸಿದರು.
ವರದಿ – ಹಫೀಝ್ ಇಸ್ಮಾಯಿಲ್
ಎಸ್ಪಿಎಲ್ ಮೀಡಿಯಾ ಟೀಮ್