ಉಪ್ಪಿನಂಗಡಿ: SSF ರಕ್ತದಾನದ ಮೂಲಕ ಸಮಾಜದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.
ದಿನದ 24 ಗಂಟೆಗಳ ಕಾಲ ರಕ್ತದ ಆವಶ್ಯಕತೆಗೆ ಬರುವ ಅದೆಷ್ಟೋ ಕರೆಗಳಿಗೆ SSF ಗೆ ಎಂದೆಂದಿಗೂ ಸ್ಪಂದಿಸಲು ಸಾಧ್ಯವಾಗಿದೆ ರಕ್ತದಾನ ಬರಿಯ ಒಂದು ದಾನವಲ್ಲ 3 ಜೀವಗಳನ್ನು ಉಳಿಸುವ ಮಹತ್ವದ ದಾನವಾಗಿದೆ ಎಂದು SSF ಉಪ್ಪಿನಂಗಡಿ ಡಿವಿಷನ್ ಅಧ್ಯಕ್ಷ ಇಸ್ಹಾಕ್ ಮದನಿ ಅಳಕ್ಕೆ ಹೇಳಿದರು.
ಅವರು ಇಂದು SSF ಸರಳಿಕಟ್ಟೆ ಸೆಕ್ಟರ್ ಸಮಿತಿ ವತಿಯಿಂದ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಬಿರವನ್ನುದ್ದೇಶಿಸಿ ಮಾತನಾಡಿದರು.
SSF ಸರಳಿಕಟ್ಟೆ ಸೆಕ್ಟರ್ ವತಿಯಿಂದ ವೆನ್ಲಾಕ್ ಆಸ್ಪತ್ರೆ ಮಂಗಳೂರು ಮತ್ತು SSF ಬ್ಲಡ್ ಸೈಬೋ ಇದರ ಸಹಬಾಗಿತ್ವದಲ್ಲಿ
ಬೃಹತ್ ರಕ್ತದಾನ ಶಿಬಿರ ಇಂದು ತೆಕ್ಕಾರಿನಲ್ಲಿ ನಡೆಯಿತು.
ನಾಸಿರ್ ಮುಈನಿ ಅಧ್ಯಕ್ಷತೆ ವಹಿಸಿದರು. SYS ಸರಳಿಕಟ್ಟೆ ಸೆಂಟರ್ ಅಧ್ಯಕ್ಷ ಜಿ.ಎಮ್ ಕುಞಿ ಮತ್ತು ವೆನ್ಲಾಕ್ ಆಸ್ಪತ್ರೆ ರಕ್ತನಿದಿ ಮುಖ್ಯಸ್ಥ ಅಶೋಕ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಖತೀಬ್ ಮಜೀದ್ ಸಖಾಫಿ,
ಜಮಾಲುದ್ದೀನ್ ಹುಮೈದಿ, ಉಸ್ಮಾನ್ ಸಅದಿ, ಉಬ್ಬಿ ಬೋವು, ರಹ್ಮಾನ್ ಪದ್ಮುಂಜಾ ದಾವೂದ್ ಉರ್ಲಡ್ಕ, ಶಿಹಾಬ್ ಬಿ. ಫಲ್ಲುದ್ದಿನ್, ಆರಿಫ್, ನೌಫಲ್ ಪಿ.ಎಸ್, ಮುಬಶ್ಯಿರ್ ಮತ್ತಿತ್ತರು ಉಪಸ್ಥಿತರಿದ್ದರು.
ಸಫ್ವಾನ್ ಕನರಾಜೆ ಸ್ವಾಗತಿಸಿ ವಂದಿಸಿದರು.
ಕೆ.ಪಿ ಬಾತಿಶ್ ತೆಕ್ಕಾರು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಹಲವಾರು ಜನರು ರಕ್ತದಾನಿಗಳಾದರು.