🛑ಕರ್ನಾಟಕ: ಹಾಡು,ಡ್ಯಾನ್ಸ್ ಮೂಲಕ ಡಿ.ಜೆ ಮುಸ್ತಾಕ್ ಎಂದೇ ಜನರ ಮನೆ ಮಾತಾಗಿದ್ದ ಹಾಡುಗಾರನಿಗೆ ಒಳಿದು ಬಂದ ಅದೃಷ್ಟ..!!
🛑ಸೌದಿ ಅರೇಭಿಯಾಕ್ಕೆ ಬರ ಮಾಡಿಕೊಂಡು ಸರ್ಪ್ರೈಸ್ ಕೊಟ್ಟ ಅಭಿಮಾನಿಗಳ ಗೆಳೆಯರ ಬಳಗ..!!
🛑ಪವಿತ್ರ ಮಕ್ಕಾಕ್ಕೆ ತೆರಳಿ ಉಮ್ರಾ ನಿರ್ವಹಿಸುತ್ತಾ ಕಾಳೆಲೆಯುತ್ತಿದ್ದವರ ಸದ್ದಡಗಿಸಿದ ಮುಹಮ್ಮದ್ ಮುಸ್ತಾಕ್ ಕಾರ್ಕಳ

ಕಾರ್ಕಳ: ಹಾಡು ಹಾಡುವ ಮೂಲಕ ಕಂಠ ಸ್ವರಗಳಿಲ್ಲದಿದ್ದರೂ ತನ್ನದೇ ಧ್ವನಿಯಲ್ಲಿ ಶಬ್ದ ಹೊರಡಿಸುತ್ತಾ ಜನರ ಮದ್ಯೆ ಹಾಸ್ಯ ಕಲಾವಿದನಾಗಿ ಜನರು ಹಾಸ್ಯ ಮಾಡುತ್ತಾ ಕುಚೇಸ್ಟೆ ಮಾಡುತ್ತಿದ್ದ ಡಿ.ಜೆ ಮುಸ್ತಾಕ್ ಕಾರ್ಕಳ ಇದೀಗ ಮುಹಮ್ಮದ್ ಮುಸ್ತಾಕ್ ಆಗಿ ಪವಿತ್ರ ಉಮ್ರಾ ಯಾತ್ರೆಗೈಯುವ ಮೂಲಕ ಜನ ಮನಸ್ಸುಗಳಲ್ಲಿ ಅದ್ಬುತ ಸ್ಥಾನ ಪಡೆದಿದ್ದಾರೆ.
ಅಷ್ಟೇ ಮಾತ್ರವಲ್ಲ ಹಾಸ್ಯ ಮಾಡುತ್ತಾ ಅವರ ಕಾಲೆಳೆಯುತ್ತಾ ಸಾಮಾಜಿಕ ಜಾಲ ತಾಣಗಳಲ್ಲಿ ದಿನ ಬೆಳಗಾದರೆ ಇವರನ್ನು ಅಪಹಾಸ್ಯ ಮಾಡುತ್ತಿದ್ದ ಮಂದಿ ಬಾಯಿಗೆ ಬೆರಳಿಟ್ಟು ನಿಬ್ಬೆರಗಾಗಿದ್ದಾರೆ.
ಇತ್ತೀಚೆಗೆ ಸೌದಿ ಅರೇಬಿಯಾದಲ್ಲಿ ನಡೆದ ಸಿ.ಎಫ್.ಎಂ ಮ್ಯಾಚ್ ಗೆ ಊರಿನಿಂದ ತನ್ನ ಅಭಿಮಾನಿಗಳು ಮುಸ್ತಾಕ್ ರವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದರು.
ಇದೇ ವೇಳೆ ಅವರು ಅಲ್ಲಿಂದ ಪವಿತ್ರ ಮೆಕ್ಕಾ ಮದೀನಾ ಕರೆದುಕೊಂಡು ಹೋಗಿ ಉಮ್ರಾ ಮಾಡಿಸಿಕೊಂಡರೆಂದು ತಿಳಿದು ಬಂದಿದೆ.

ಬಡ ಕುಟುಂಬದಲ್ಲಿ ಜನಿಸಿದ ಡಿ.ಜೆ ಮುಸ್ತಾಕ್ ಯುವತ್ವ ತುಂಬಿದ ಜೀವವಾದರೂ ಯಾವುದು ಸರಿ ಯಾವುದು ತಪ್ಪು ಎಂದು ಅರಿತುಕೊಳ್ಳಲು ಸಾಧ್ಯವಾಗದ ಒಂದು ಮಗುವಿನ ಮನಸ್ಸಿನವ ಎಂದರೂ ತಪ್ಪಾಗಲಾರದು.
ದಿನನಿತ್ಯ ಜನರು ಅಂತಹ ವ್ಯಕ್ತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆ, ವ್ಯಂಗ್ಯವಾಡುತ್ತಾ ಇದ್ದ ಜನತೆಯನ್ನು ಇದೀಗ ಮುಸ್ತಾಕ್ ನಿಬ್ಬೆರೆಗಾಗಿಸಿದ್ದು ಕೈ ತುಂಬಾ ಸಂಪತ್ತಿದ್ದು ಪವಿತ್ರವಾದ ಮೆಕ್ಕಾ ಮದೀನಾ ಯಾತ್ರೆಗೆಯ್ಯಲು ಸಾಧ್ಯವಾಗದ ಅದೆಷ್ಟೋ ಮಂದಿಗಳ ಮಧ್ಯೆ ಮುಸ್ತಾಕ್ ಪವಿತ್ರ ಉಮ್ರಾ ಮಾಡುವ ಮೂಲಕ ಅಚ್ಚರಿಗೊಳಿಸಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಮುಹಮ್ಮದ್ ಮುಸ್ತಾಕ್ ರವರ ಫೋಟೋವೇ ವೈರಲ್ ಆಗುತ್ತಿದ್ದು ಮುಸ್ತಾಕ್ ರವರ ಈ ಕಾರ್ಯದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದೆ.
ಏನೆ ಆಗಲಿ ಪವಿತ್ರ ಮಕ್ಕಾಕ್ಕೆ ತೆರಳಿ ಉಮ್ರಾ ಕರ್ಮವನ್ನು ನಿರ್ವಹಿಸಿದ ಡಿ.ಜೆ.ಮುಸ್ತಾಕ್ ಮುಂದಕ್ಕೆ ಮುಹಮ್ಮದ್ ಮುಸ್ತಾಕ್ ಆಗಿ ಬದಲಾಗಲಿ ಎನ್ನುವುದೇ ಒಳ್ಳೆಯ ಮನಸ್ಸಿನ ಹಂಬಲ ಮತ್ತು ನಮ್ಮೆಲ್ಲರ ಆಶಯ..