ಪುತ್ತೂರು : ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ (ರಿ.) ಎಸ್ವೈಎಸ್ ದಕ್ಷಿಣ ಈಸ್ಟ್ ಜಿಲ್ಲಾ ಸಮಿತಿಯಿಂದ ಟೀಂ ಇಸಾಬಾ ಮೀಲಾದ್ ರ್ಯಾಲಿಯು ದಿನಾಂಕ 23.10.2022 ರಂದು ಉಪ್ಪಿನಂಗಡಿಯಲ್ಲಿ ನಡೆಯಿತು. ರ್ಯಾಲಿಯು ಕೂಟೇಲ್ ದರ್ಗಾ ದಿಂದ ಆರಂಭಗೊಂಡು ಉಪ್ಪಿನಂಗಡಿ ನಗರ ಮೂಲಕ ರಿಕ್ಷಾ ತಂಗುದಾಣದಲ್ಲಿ ಕೊನೆಗೊಂಡಿತು. ಅಸೆಯ್ಯಿದ್ ಅಬ್ದುಸ್ಸಲಾಂ ತಂಙಲ್ ರವರು ದರ್ಗಾ ಝಿಯಾರತ್ಗೆ ನೇತೃತ್ವ ವಹಿಸಿದರು.

ರಾಜ್ಯ ಜಂಇಯ್ಯತುಲ್ ಉಲಮಾ ನಾಯಕರಾದ ಮುಹಮ್ಮದ್ ಸಅದಿ ಉಸ್ತಾದ್ ವಳವೂರು, ಕಾಸಿಂ ಮದನಿ ಉಸ್ತಾದ್ ಕರಾಯ ಹಾಗೂ ಹೈದರ್ ಮದನಿರವರು ಸ್ವಾಗತ ಸಮಿತಿಯ ಚೇರ್ಮನ್ ಶುಕೂರು ಮೇದರಬೆಟ್ಟುರವರಿಗೆ ಎಸ್ವೈಎಸ್ ಧ್ವಜ ಹಸ್ತಾಂತರ ಮಾಡುವ ಮೂಲಕ ರ್ಯಾಲಿಗೆ ಚಾಲನೆ ನೀಡಿದರು.
ಎಸ್ವೈಎಸ್ ರಾಜ್ಯಾಧ್ಕಕ್ಷರಾದ ಡಾ. ಎಮ್ಮೆಸ್ಸೆಂ ಝೈನಿ ಕಾಮಿಲ್ ರವರು ಮೀಲಾದ್ ಸಂದೇಶ ಭಾಷಣವನ್ನಿತ್ತರು. ಎಸ್ವೈಎಸ್ ದ.ಕ. ಈಸ್ಟ್ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಸಅದಿ ಮಜೂರು ಕಾರ್ಯಕ್ರಮದ ಅಧ್ಯಕ್ಷ ವಹಿಸಿದರು. ಮಾಲಿಕುದ್ದೀನಾರ್ ಜುಮಾ ಮಸ್ಜಿದ್ ಉಪ್ಪಿನಂಗಡಿ ಅಧ್ಯಕ್ಷರಾದ ಹಾಜಿ ಮುಸ್ತಫಾ ಕೆಂಪಿ, ಸಾಮಾಜಿಕ ಮುಂದಾಳು ನಝೀರ್ ಮಠ ಶುಭ ಹಾರೈಸಿದರು.
ಜಂಇಯ್ಯತುಲ್ ಉಲಮಾ ರಾಜ್ಯ ನಾಯಕರಾದ ಯೂಸುಫ್ ಸಅದಿ ಮಠ, ಎಸ್ವೈಎಸ್ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ಕೆ. ಮದನಿ, ಎಸ್ವೈಎಸ್ ರಾಜ್ಯ ಸಾಂತ್ವಾನ ಕಾರ್ಯದರ್ಶಿ ಬಶೀರ್ ಸಅದಿ ಬೆಂಗಳೂರು, ರಾಜ್ಯ ಸಂಘಟನಾ ಕಾರ್ಯದರ್ಶಿ ಜಿ. ಎಂ. ಕಾಮಿಲ್ ಸಖಾಫಿ, ಈಸ್ಟ್ ಜಿಲ್ಲಾ ಉಸ್ತುವಾರಿ ವಿ. ಪಿ. ಮೊಯ್ದಿನ್ ಪೊನ್ನತ್ ಮೊಟ್ಟೆ, ರಾಜ್ಯ ಸಾಮಾಜಿಕ ಕಾರ್ಯದರ್ಶಿ ಕಾಸಿಂ ಪದ್ಮುಂಜ, ಟೀಂ ಇಸಾಬಾ ರಾಜ್ಯ ಡೈರೆಕ್ಟರ್ ಇಕ್ಬಾಲ್ ಬಪ್ಪಳಿಗೆ, ಎಸ್ವೈಎಸ್ ರಾಜ್ಯ ನಾಯಕರಾದ ಎಂ. ಎಚ್. ಖಾದರ್ ಹಾಜಿ, ಹಮೀದ್ ಬೀಜಕೊಚ್ಚಿ, ಮುಪತ್ತೀಸ್ ರಾಜ್ಯಾಧ್ಯಕ್ಷರಾದ ಹನೀಫ್ ಮಿಸ್ಬಾಹಿ, ಎಸ್ವೈಎಸ್ ಈಸ್ಟ್ ಜಿಲ್ಲಾ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಸಖಾಫಿ ಕೊಡುಂಗಾಯಿ, ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮಾಲಿಕಿ, ಎಸ್ಎಂಎ ಈಸ್ಟ್ ಜಿಲ್ಲಾಧ್ಯಕ್ಷರಾದ ಅಸೆಯ್ಯಿದ್ ಸಾದಾತ್ ತಂಙಲ್ ಕರ್ವೇಲ್, ಎಸ್ವೈಎಸ್ ಜಿಲ್ಲಾ ಕೋಶಾಧಿಕಾರಿ ಜಿ. ಮುಹಮ್ಮದ್ ಕುಂಞಿ ಜೋಗಿಬೆಟ್ಟು, ದಅ್ವಾ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮಿಸ್ಬಾಹಿ, ಸಾಂತ್ವನ ಕಾರ್ಯದರ್ಶಿ ಸ್ವಾಲಿಹ್ ಮುರ, ಮಾಧ್ಯಮ ಕಾರ್ಯದರ್ಶಿ ಯೂಸುಫ್ ಸಯೀದ್ ಪುತ್ತೂರು, ಸಾಮಾಜಿಕ ಕಾರ್ಯದರ್ಶಿ ಅಬ್ದುಲ್ ಕರೀಂ ಹಾಜಿ ಚೆನ್ನಾರ್, ಟೀಂ ಇಸಾಬಾ ಜಿಲ್ಲಾ ಡೈರೆಕ್ಟರ್ ಶಂಸುದ್ದೀನ್ ಬೆಳ್ಳಾರೆ, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಮುಹಮ್ಮದಾಲಿ ತುರ್ಕಲಿಕೆ, ಸ್ವಾಗತ ಸಮಿತಿ ಕನ್ವೀನರ್ ಅಬ್ಬಾಸ್ ಬಟ್ಲಡ್ಕ, ಉಮರಾ ನಾಯಕರಾದ ಅಬ್ದುರ್ರಶೀದ್ ಹಾಜಿ ಶುಕ್ರಿಯಾ, ಇಸ್ಹಾಖ್ ಹಾಜಿ ಮೇದರಬೆಟ್ಟು, ಮುಸ್ತಫಾ ಸುಳ್ಯ, ಖಾಸಿಂ ಹಾಜಿ ಮಿತ್ತೂರು, ಆದಂ ಹಾಜಿ ಪುತ್ತೂರು ಮೊದಲಾದವರು ರ್ಯಾಲಿಯಲ್ಲಿ ಭಾಗವಹಿಸಿದರು.




ರ್ಯಾಲಿಯ ಗಮನ ಸೆಳೆದ ದಫ್ ಮತ್ತು ಸ್ಕೌಟ್ ರ್ಯಾಲಿ
ರ್ಯಾಲಿಯಲ್ಲಿ ದಫ್, ಸ್ಕೌಟ್, ಹೂಗುಚ್ಚದೊಂದಿಗೆ ವಿಧ್ಯಾರ್ಥಿಗಳ ಹೆಜ್ಜೆ ನೋಡುಗರಿಗೆ ಆಕರ್ಷಣೀಯವಾಗಿತ್ತು ಜಾಕೆಟ್ ಧರಿಸಿದ ಇಸಾಬಾ ತಂಡದ ನಡಿಗೆ ರ್ಯಾಲಿಗೆ ಮತ್ತಷ್ಟು ಮೆರುಗು ನೀಡಿತು. ಶುಭ್ರ ಬಿಳಿ ವಸ್ತ್ರಧಾರಿಯಾದ ಯುವಕರ ಪಡೆ ವೈವಿಧ್ಯಮಯ ಬಣ್ಣಗಳಿಂದ ಕೂಡಿದ ಧ್ವಜವು ಶಾಂತಿಯನ್ನು ಸೂಚಿಸುತಿತ್ತು ಜಂಇಯ್ಯತುಲ್ ಉಲಮಾ ನಾಯಕರು ರ್ಯಾಲಿಯುದ್ದಕ್ಕೂ ಹೆಜ್ಜೆಗಳನ್ನಿಟ್ಟು ಮಾದರಿಯಾದರು.


ಎಸ್ವೈಎಸ್ ದ.ಕ. ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಬಿ. ಸ್ವಾದಿಖ್ ಮಲೆಬೆಟ್ಟು ಸ್ವಾಗತಿಸಿದರು. ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಅಬ್ಬಾಸ್ ಮದನಿ ಬಂಡಾಡಿ ಧನ್ಯವಾದಗೈದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಗಳಪದವು ಕಾರ್ಯಕ್ರಮ ನಿರ್ವಹಿಸಿದರು.